ಹ್ಯಾಮಿಲ್ಟನ್(ಜ:31): ನ್ಯೂಜಿಲ್ಯಾಂಡ್ ವಿರುದ್ಧ ಸರಣಿ ಗೆದ್ದ ಖುಷಿಯಲ್ಲಿ ಮೈಮರೆತಿರುವ ಟೀಮ್ ಇಂಡಿಯಾ 4ನೆೇ ಏಕದಿನ ಪಂದ್ಯದಲ್ಲಿ ಕೇವಲ 92 ರನ್ ಆಲೌಟ್ ಆಗಿದೆ. ಟ್ರೆಂಟ್ ಬೋಲ್ಟ್ ಹಾಗೂ ಕಾಲಿನ್ ಡಿ ಗ್ರಾಂಡ್ ಹೋಂ ಅವರ ಮಾರಕ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ 30.4 ಓವರ್ ಗಳಲ್ಲಿ ಕೇವಲ 92 ರನ್ ಆಲೌಟ್ ಆಗಿ ತೀವ್ರ ಮುಖಭಂಗ ಅನುಭವಿಸಿದೆ.

ಭಾರತದ ಪರ ರೋಹಿತ್ ಶರ್ಮಾ 7,ಧವನ್ 13,ಶುಭಮನ್ ಗಿಲ್ 9,ಅಂಬಾಟಿ ರಾಯುಡು 0,ಕೇದಾರ್ ಜಾದವ್ 1,ದಿನೇಶ್ ಕಾರ್ತಿಕ್ 0,ಹಾರ್ದಿಕ್ ಪಾಂಡ್ಯ 16, ಭುವನೇಶ್ವರ್ ಕುಮಾರ್ 1,ಕುಲದೀಪ್ ಯಾದವ್ 15,ಚಾಹಲ್ ಅಜೇಯ 18,ಖಲೀಲ್ ಅಹ್ಮದ್ 5 ರನ್ ಗಳಿಸಿದ್ದಾರೆ.