ವೆಲ್ಲಿಂಗ್ಟನ್(ಫೆ:06): ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ಇಂದಿನಿಂದ ಅಂತಾರಾಷ್ಟ್ರೀಯ ಟಿ 20 ಪಂದ್ಯ ನಡೆಯಲಿದ್ದು,ಈಗಾಗಲೇ ಏಕದಿನ ಸರಣಿಯಲ್ಲಿ ನ್ಯೂಜಿಲ್ಯಾಂಡ್ ಗೆ ಸೋಲಿನ ರುಚಿ ತೋರಿಸಿರುವ ಟೀಮ್ ಇಂಡಿಯಾ ಟಿ 20 ಸರಣಿಯನ್ನು ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಟಿ 20 ಸ್ಪೆಷಲಿಸ್ಟ್ ಗಳಾದ ರಿಷಬ್ ಪಂತ್,ಕೃನಲ್ ಪಾಂಡ್ಯ ತಂಡಕ್ಕೆ ವಾಪಾಸಾಗಿದ್ದು,ಎಲ್ಲಾ ಆಟಗಾರರು ಫಾರ್ಮ್ ನಲ್ಲಿ ಇರುವುದರಿಂದ ಯಾರು ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆಯುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

ನ್ಯೂಜಿಲ್ಯಾಂಡ್ ಗೆ ಟಿ 20 ಸರಣಿ ಆರಂಭಕ್ಕೂ ಮುನ್ನವೇ ಶಾಕ್ ಒಂದು ಎದುರಾಗಿದ್ದು,ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ಗಾಯದ ಸಮಸ್ಯೆಯಿಂದ ತಂಡದಿಂದ ಔಟ್ ಆಗಿದ್ದಾರೆ.