ಮಂಡ್ಯ(ಮೇ:30): ನರೇಂದ್ರ ಮೋದಿ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಸಾಧಿಸಿ, 2 ನೇ ಬಾರಿ ದೇಶದಲ್ಲಿ ಪ್ರಧಾನಿಯಾಗಿ ಮುಂದುವರಿಯುತ್ತಿದ್ದಾರೆ ಹಾಗೂ ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.

ಇಂದು ದೇಶದಾದ್ಯಂತ ಮೋದಿಯ ಅಭಿಮಾನಿಗಳು ಹಲವಾರು ರೀತಿಯಲ್ಲಿ ಸಂಭ್ರಮಾಚರಣೆ ಸವೆಸುತ್ತಿದ್ದಾರೆ. ಹೀಗೊಂದು ವಿಭಿನ್ನ, ವಿಶಿಷ್ಟವಾದ ರೀತಿಯಲ್ಲಿ ಮಂಡ್ಯ ಜಿಲ್ಲೆಯ ಮೋದಿಯ ಅಪ್ಪಟ್ಟ ಅಭಿಮಾನಿಗಳು ರುಚಿಯಾದ ಬಿಸಿ ಬಿಸಿ ಚಹಾವನ್ನು ಜನರಿಗೆ ಹಂಚಿ ಸಂಭ್ರಮಿಸಿದ್ದಾರೆ.

ಮೋದಿ ಅಭಿಮಾನಿ ಶಿವಕುಮಾರ್ ಆರಾಧ್ಯರಿಂದ ಚಹಾ ವಿತರಣೆ ಮಾಡಿರುವುದು ಮಂಡ್ಯ ಜನರ ಗಮನ ಸೆಳೆದಿದೆ.