ಪುಣೆ(ಜ:17): ಪುಣೆಯಲ್ಲಿ ನಡೆಯುತ್ತಿರುವ “ಖೇಲೋ ಇಂಡಿಯಾ ಯೂತ್ ಗೇಮ್ಸ್”ನಲ್ಲಿ ಕರ್ನಾಟಕದ ಈಜು ಪಟು ಶ್ರೀಹರಿ ನಟರಾಜನ್ ಹೊಸ ದಾಖಲೆ ನಿರ್ಮಿಸಿದ್ದಾರೆ.

ಗುರುವಾರ ನಡೆದ ಈಜು ಸ್ಪರ್ಧೆಯಲ್ಲಿ ಅವರು ಸ್ಪರ್ಧಿಸಿದ ಎಲ್ಲಾ ವಿಭಾಗಗಳಲ್ಲೂ ಚಿನ್ನದ ಪದಕ ಜಯಿಸಿದ್ದಾರೆ.ಕಳೆದಬಾರಿ ನಡೆದ ಖೇಲೊ ಇಂಡಿಯಾ ಸ್ಕೂಲ್ ಗೇಮ್ಸ್ ನಲ್ಲಿ 6 ಚಿನ್ನದ ಪದಕ ಜಯಿಸಿದ್ದರು,ಆದರೆ ಈ ಬಾರಿ ತಮ್ಮ ಸಾಮರ್ಥ್ಯವನ್ನು ಉತ್ತಮಗೊಳಿಸಿ ಈ ದಾಖಲೆ ನಿರ್ಮಿಸಿದ್ದಾರೆ.

ಶ್ರೀಹರಿ ನಟರಾಜನ್ ಅವರ ಮುಂದಿನ ಗುರಿ ಮುಂಬರುವ ವಿಶ್ವ ಚಾಂಪಿಯನ್ ಶಿಪ್,ಇದಕ್ಕೆ ಪ್ರಮುಖ ಪರೀಕ್ಷೆಗಳಿದ್ದು,ಅವುಗಳನ್ನು ಉತ್ತಮ ರೀತಿಯಲ್ಲಿ ಮುಗಿಸಿದ ಬಳಿಕ ನನ್ನ ತರಬೇತಿ ಆರಂಭಿಸುತ್ತೇನೆ ಎಂದು ಶ್ರೀಹರಿ ತಿಳಿಸಿದ್ದಾರೆ.