ಮುಂಬೈ(ಫೆ:13): ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಫೀಲ್ಡರ್ ಎಂದಾಗ ನೆನಪಿಗೆ ಬರುವುದು ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್,ಇವರ ಫೀಲ್ಡಿಂಗ್ ಮೀರಿಸುವವರು ಸದ್ಯ ಯಾವ ತಂಡದಲ್ಲೂ ಇಲ್ಲ,ಆದರೆ ಸ್ವತಃ ಅವರೇ ವಿಶ್ವದ ನಂ. 1 ಫೀಲ್ಡರ್ ಹೆಸರು ಬಹಿರಂಗ ಪಡಿಸಿದ್ದಾರೆ.

ಇವರ ಪ್ರಕಾರ ಆಧುನಿಕ ಕ್ರಿಕೆಟ್ ನ ಬೆಸ್ಟ್ ಫೀಲ್ಡರ್,ಟೀಮ್ ಇಂಡಿಯಾದ ಸುರೇಶ ರೈನಾ,ರೈನಾ ಅಭಿಮಾನಿಯಾಗಿರುವ ರೋಡ್ಸ್ ಅವರ ಫೀಲ್ಡಿಂಗ್ ಗೆ ಮಾರುಹೋಗಿದ್ದಾರೆ. ಫೀಲ್ಡಿಂಗ್ ವೇಳೆ ಚುರುಕಾಗಿರುವ ರೈನಾ ಅತ್ಯುತ್ತಮ ಫೀಲ್ಡರ್ ಎಂದು ರೋಡ್ಸ್ ಹೇಳಿದ್ದಾರೆ. ಭಾರತದಲ್ಲಿ ಫೀಲ್ಡಿಂಗ್ ಮಾಡುವುದು ಅಷ್ಟು ಸುಲಭವಲ್ಲ,ಮೈದಾನವನ್ನು ಹಾಗೂ ಫೀಲ್ಡ್ ಕಂಡೀಶನ್ ಅನ್ನು ಗಮನದಲ್ಲಿಟ್ಟು ಫೀಲ್ಡಿಂಗ್ ಮಾಡಬೇಕು,ಸುರೇಶ್ ರೈನಾ ಯಾವುದೇ ಸಂದರ್ಭದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ್ದಾರೆ ಎಂದಿದ್ದಾರೆ.