ನವದೆಹಲಿ:(ಫೆ20): ಪ್ರತಿಷ್ಠಿತ ರಿಲಾಯನ್ಸ್ ಕಂಪನಿಯ ಮುಖ್ಯಸ್ಥರಾದ ಅನಿಲ್ ಅಂಬಾನಿಗೆ ನ್ಯಾಯಾಂಗ ನಿಂದನೆಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಪರಾಧಿ ಎಂದು ಹೇಳುವುದರ ಜೊತೆಗೆ ಖಡಕ್ ಸೂಚನೆಯನ್ನು ನೀಡಿದೆ ನಾಲ್ಕು ವಾರದೊಳಗೆ ಎರಿಕ್ಸನ್ ಸಂಸ್ಥೆಗೆ 550 ಕೋಟಿ ಕಟ್ಟದಿದ್ದರೆ ಜೈಲು ಶಿಕ್ಷೆ ಖಂಡಿತಾ ಎನ್ನಲಾಗಿದೆ.

ರಿಲಾಯನ್ಸ್ ಕಮ್ಯುನಿಕೇಷನ್ ಸಂಸ್ಥೆಯವರು ಎರಿಕ್ಸನ್ ಸಂಸ್ಥೆಯವರಿಂದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿ ಮಾಡಿದ್ದು, ಎರಿಕ್ಸನ್ ಕಂಪನಿಗೆ ರಿಲಾಯನ್ಸ್ ಕಂಪನಿಯವರು ಹಣವನ್ನು ಕೊಡಬೇಕಿತ್ತು. ಆದರೆ ಹಣ ಕೊಡದೆ ಇದ್ದರಿಂದ ಎರಿಕ್ಸನ್ ಸಂಸ್ಥೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‍ನ ನ್ಯಾಯ ಮೂರ್ತಿ ಆರ್.ಎಫ್. ನಾರಿಮನ್ ಹಾಗೂ ವಿನುತ್ ಸರಣ್ ರವರನ್ನೊಳಗೊಂಡ ದ್ವಿಸದಸ್ಯತ್ವ ಪೀಠ ವಿಚಾರಣೆ ನಡೆಸಿದ ನಂತರ ರಿಲಾಯನ್ಸ್ ಕಂಪನಿಯವರಿಗೆ ಖಡಕ್ ವಾರ್ನ್ ಮಾಡಿದೆ.

ಎರಿಕ್ಸನ್ ಸಂಸ್ಥೆಗೆ 453 ಕೋಟಿ ರೂ ಹಣದ ಜೊತೆಗೆ ಹೆಚ್ಚುವರಿ 118 ಕೋಟಿ ರೂ ನಾಲ್ಕು ವಾರದೊಳಗೆ ಪಾವತಿಸ ಬೇಕು ಇಲ್ಲದಿದ್ದರೆ ಜೈಲು ಶಿಕ್ಷೆ ಖಂಡಿತಾ ಎಂದು ಸುಪ್ರೀಂ ಹೇಳಿದೆ.