ಮುಂಬೈ(ಜ,25): ಬಾಲಿವುಡ್ನಲ್ಲಿ ತನ್ನ ಮಾದಕ ಅಭಿನಯದಿಂದ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಸನ್ನಿಲಿಯೋನ್ ಈಗ ಮಾಲಿವುಡ್ನತ್ತ ಮುಖ ಮಾಡಿದ್ದಾರೆ.
ಹೌದು ರಂಗೀಲಾ ಚಿತ್ರದ ಮೂಲಕ ಮಾಲಿವುಡ್ಗೆ ಎಂಟ್ರಿ ಕೊಡುವ ಸುದ್ದಿಯನ್ನು ಸನ್ನಿ ಬಹಿರಂಗಗೊಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸನ್ನಿಲಿಯೋನ್, ನಾನು ರಂಗೀಲಾ ಚಿತ್ರ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಿದ್ದೇನೆ. ಬ್ಯಾಕ್ವಾಟರ್ ಸ್ಟುಡಿಯೋಸ್ ಬ್ಯಾನರ್ನಲ್ಲಿ ಬರುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರಾಗಿ ಸಂತೋಷ ನಾಯರ್ ಹಾಗೂ ನಿರ್ಮಾಪಕರಾಗಿ ಜಯಮಹಲ್ ಮೆನನ್ ಕಾರ್ಯನಿರ್ವಹಿಸಲಿದ್ದಾರೆ. ಫೆಬ್ರವರಿಯಿಂದ ಚಿತ್ರೀಕರಣ ಶುರುವಾಗಲಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಫೋನ್ ಅಂಗಡಿಯೊಂದನ್ನು ಉದ್ಘಾಟಿಸಲು ಕೇರಳಕ್ಕೆ ತೆರಳಿದಾಗ ಸನ್ನಿಯನ್ನು ನೋಡಲು ಜನ ಸಾಗರವೇ ಸೇರಿತ್ತು. ಈ ಜನರನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸ್ ಹರಸಾಹಸ ಪಡಬೇಕಾಯಿತು.
ಒಟ್ಟಾರೆ ಮಾಲಿವುಡ್ ಗೆ ಸನ್ನಿ ಎಂಟ್ರಿ ಭಾರೀ ಕುತೂಹಲ ಮೂಡಿಸಿದ್ದು, ಅವರ ಅಭಿಮಾನಿಗಳು ಸಿನೆಮಾ ನೋಡಲು ಕಾತುರಾರಗಿದ್ದು, ಮಾಲಿವುಡ್ ನಲ್ಲಿಯೂ ಸನ್ನಿ ಕಮಾಲ್ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.