ಬೆಂಗಳೂರು(ಜೂನ್.06) ಮಂಡ್ಯ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭಾರೀ ಮತಗಳ ಅಂತರದಿಂದ ಜಯವನ್ನು ಗಳಿಸಿದ ಸಂಸದೆ ಸುಮಲತಾ ಅಂಬರೀಶ್ ಮೊದಲ ಬಾರಿಗೆ ಲೋಕಸಭೆಯ ತೆರಳಿದ್ದಾರೆ.

ಲೋಕಸಭೆ ಸಭೆಯನ್ನು ಪ್ರವೇಶಿಸಿದ ಬಳಿಕ ಸುಮಲತಾ ಅಂಬರೀಶ್ ಸಂಸತ್ ಭವನದ ಎದುರು ನಿಂತು ಪೋಟೋ ತೆಗೆಸಿಕೊಂಡು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

`ಪ್ರಜಾಪ್ರಭುತ್ವದ ದೇಗುಲಕ್ಕೆ ಇದೊಂದು ಸುದೀರ್ಘ ಪಯಣ’, ಜೈಹಿಂದ್ ಜೈ ಕರ್ನಾಟಕ. ಇದೊಂದು ಹೆಮ್ಮೆ, ಗೌರವದ ಸಂಗತಿ ಎಂದು ಬರೆದುಕೊಂಡಿದ್ದಾರೆ.