ಬೆಂಗಳೂರು(ಜೂ:08): ನಿಮಗೆ ಬೇಜಾರಿದ್ರೆ ರಾಜೀನಾಮೆ ಕೊಡಿ, ಕೆಲಸ ಮಾಡೋರು ಇದ್ದಾರೆ ಎಂದು ಸಾರಿಗೆ ಸಚಿವ ಡಿ. ಸಿ. ತಮ್ಮಣ್ಣ ವಿರುದ್ಧ ಸುಮಲತಾ ಅಂಬರೀಶ್ ಅಸಮಾಧಾನ ಹೊರಹಾಕಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮದ್ದೂರಿನಲ್ಲಿ ಮಾತನಾಡಿದ್ದ ಡಿ.ಸಿ. ತಮ್ಮಣ್ಣ ಹೇಳಿಕೆಗೆ ಸುಮಲತಾ ಅಂಬರೀಶ್ ಟಾಂಗ್ ನೀಡಿದ್ದು, ನಿಮ್ಮ ಹೇಳಿಕೆಯೆ ನಿಮ್ಮ ಸೋಲಿಗೆ ಕಾರಣ, ನಿಮ್ಮನೂ ಗೆಲಿಸಿದ್ದು ಜನರೇ ನೆನಪಿರಲಿ ಎಂದು ಆಕ್ರೋಶಗೊಂಡರು.

ನಾವು ಸಾಕಷ್ಟು ಅಭಿವೃದ್ಧಿ ಪರವಾಗಿ ಕೆಲಸ ಮಾಡಿದ್ದೀನಿ, ನೀವು ಅದನ್ನು ನೆನಪಿಸಿಕೊಂಡ್ರ ಈಗ ಬಂದು ಮಾತನಾಡ್ತೀರ..? ಎಂದು ಜನರನ್ನು ಪ್ರಶ್ನೆ ಮಾಡಿದ್ದ ಡಿ ಸಿ ತಮ್ಮಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಮಲತಾ ನಿಮಗೆ ಬೇಜಾರಿದ್ರೆ ರಾಜೀನಾಮೆ ಕೊಡಿ, ಕೆಲಸ ಮಾಡೋರು ಇದ್ದಾರೆ ಎಂದು ಟಾಂಗ್ ಕೊಟ್ಟರು.