ಮಂಡ್ಯ(ಮಾ,11): ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಅಧಿಕೃತ ಫೇಸ್‍ಬುಕ್ ಖಾತೆಯನ್ನು ಸುಮಲತಾ ಅವರು ತೆರೆದಿದ್ದಾರೆ.

ಫೇಸ್‍ಬುಕ್ ಮೂಲಕ ಜನರ ಬೆಂಬಲ ಪಡೆಯಲು ಸುಮಲತಾ ಅಂಬರೀಶ್ ತಮ್ಮ ಹೆಸರಿನಲ್ಲಿ ಅಧಿಕೃತ ಫೇಸ್‍ಬುಕ್ ಖಾತೆಯೊಂದನ್ನ ತೆರೆದಿದ್ದಾರೆ. ಇನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಭಾರೀ ಸಂಚಲನ ಮೂಡಿಸಿದೆ. ಯಾವ ಪಕ್ಷಕ್ಕೆ ಯಾರು ಅಭ್ಯರ್ಥಿ ಎಂಬ ಗೊಂದಲ ಮುಂದುವರೆದಿದ್ದು ಹಲವು ವಿರೋಧದ ನಡುವೆಯೂ ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ಮತ್ತಷ್ಟೂ ಹತ್ತಿರವಾಗಲು ಸುಮಲತಾ ಅವರು ನಿರ್ಧರಿಸಿದ್ದಾರೆ.

ನಾನು ನಿಮ್ಮ ಸುಮಲತಾ ಅಂಬರೀಶ್. ನಾನು ನಿಮಗೆ ಸಾಮಾಜಿಕ ಜಾಲತಾಣದಲ್ಲೂ ಸಿಗುತ್ತೇನೆ. ನಿಮ್ಮ ಜೊತೆ ಫೇಸ್‍ಬುಕ್, ಟ್ವಿಟ್ಟರ್‍ನಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ.