ಬೀದರ್(ಜೂ:01): ಕೆಲಸ ಮಾಡುವ ಸ್ಥಳಗಳಲ್ಲಿ ಮೇಲಾಧಿಕಾರಿಗಳು ನೀಡುವ ಕಿರುಕುಳ ಇತ್ತಿಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಹೀಗೆ ಕಿರುಕುಳ ಕೊಡುವ ಅಧಿಕಾರಿಗಳ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಶಿಕ್ಷೆ ಕೊಡಿಸಬಹುದು. ಆದರೆ ಬೀದರ್ ಜಿಲ್ಲೆಯ ಮಠಾಳದಲ್ಲಿ ನಡೆದಿರುವ ಘಟನೆ ಭಿನ್ನವಾಗಿದೆ. ಬೇಲಿಯೇ ಎದ್ದು ಹೊಲವನ್ನು ಮೇಯುವಂತೆ ಕಿರುಕುಳ ನೀಡುವವರನ್ನು ಬಂಧಿಸಿವ ಪೊಲೀಸ್ ಠಾಣೆಯಲ್ಲೇ ಮೇಲಾಧಿಕಾರಿಗಳು ಕಿರುಕುಳ ನೀಡಿದ್ದಾರೆ.

ಮಠಾಳ ಪೊಲೀಸ್ ಠಾಣೆಯ ಎಎಸ್ ಐ ಆಶೋಕ್ ಚವ್ಹಾನ್ ರವರು ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸೆತ್ತು ಆತ್ಮಹತ್ಯೆಗೆ ಪ್ರತ್ನಿಸಿರುವ ಘಟನೆ ಕಂಡುಬಂದಿದೆ. 4 ಪುಟಗಳ ಡೆತ್ ನೋಡ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನ ಮಾಡಿರುವ ಆಶೋಕ್ ಚವ್ಹಾಣ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿರುವ ಚಿಕಿತ್ಸೆ ಪಡೆಯುತ್ತಿರುವ ಎಎಸ್ ಐ ಅವರ ಸ್ಥಿತಿ ಗಂಭೀರವಾಗಿದೆ.