ಬೆಂಗಳೂರು(ಜ:29): ಸುದೀಪ್ ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು,1999 ರಲ್ಲಿ ತೆರೆಕಂಡ ‘ತಾಯವ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ನಂತರ ಅದೇ ವರ್ಷದಲ್ಲಿ ತೆರೆಕಂಡ ‘ಪ್ರತ್ಯರ್ಥ’ ಚಿತ್ರದಲ್ಲಿ ಸಹಾಯಕ ನಟನಾಗಿ ಕಾಣಿಸಿಕೊಂಡರು,2000ರಲ್ಲಿ ತೆರೆಕಂಡ ಸುನೀಲ್ ಕುಮಾರ್ ದೇಸಾಯಿ ಅವರ ನಿರ್ದೇಶನದ ‘ಸ್ಪರ್ಶ’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಕಾಣಿಸಿಕೊಂಡರು.

ಇಂದಿಗೆ ಸುದೀಪ್ ತಮ್ಮ ಸಿನಿ ಪಯಣದಲ್ಲಿ ಬರೋಬ್ಬರಿ 23 ವರ್ಷ ಪೂರೈಸಿದ್ದಾರೆ, ಈ ಸಂದರ್ಭದಲ್ಲಿ ಅನೇಕ ನಟರು ಹಾಗೂ ಅಭಿಮಾನಿಗಳು ಕಿಚ್ಚನಿಗೆ ಶುಭಾಷಯ ಕೋರಿದ್ದಾರೆ. ಅಷ್ಟೇ ಅಲ್ಲದೇ 23 ವರ್ಷ ಕಳೆದಿದ್ದೀರಿ,ಹಾಗಾಗಿ ಸರ್ಪ್ರೈಸ್ ಸೂನ್ ಎಂಬ ಪೋಸ್ಟರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.