ಧಾರವಾಡ(ಆಗಸ್ಟ್.19) ಸುದ್ದಿ ಸೂರಪ್ಪ ಹೆಬ್ಭಳ್ಳಿಯ ಷಡಕ್ಷರಿ ಚಲವಾದಿ. ಷಡಕ್ಷರಿ ಚಂದ್ರಪ್ಪ ಚಲವಾದಿ ಇವರು ನಿವೃತ್ತ ಭೂಮಾಪನ ಇಲಾಖೆಯ ಅಧಿಕಾರಿ ಇವರು ನಿವೃತ್ತಿ ನಂತರ ಗ್ರಾಮದಲ್ಲಿ ಸುದ್ದಿ ತಲುಪಿಸುವ ಕಾಯಕದಲ್ಲಿ ತಲ್ಲೀನರಾಗಿದ್ದಾರೆ ಅದು ಹೇಗೆ ಅಂತೀರಾ, ಹೆಗಲಿಗೆ ಗಂಟೆ ಹಾಕಿಕೊಂಡು ಗಂಟೆ ಬಾರಿಸಿ ಸುದ್ದಿ ಹಂಚುತ್ತಾರೆ. ಹೌದು ಎಂತಹ ಸುದ್ದಿಗಳೆಂದರೆ ಗ್ರಾಮದಲ್ಲಿ ಯಾರಾದರೂ ಮೃತರಾದರೆ ಇಡೀ ಗ್ರಾಮ ಸಂಚರಿಸಿ ಗ್ರಾಮದ ಮನೆ ಮನೆಗೆ ಹೋಗಿ ಇಂತವರು ಮೃತರಾಗಿದ್ದಾರೆ ಇಷ್ಟು ಗಂಟೆಗೆ ಅಂತ್ಯ ಸಂಸ್ಕಾರ ಇರುತ್ತದೆ ಎಂದು ತಿಳಿಸುವುದು.

ಮರುದಿನ ಮೃತರಾದ ಮನೆಯಲ್ಲಿ ಸಂತಾಪ ಸೂಚಕ ಸಭೆ ಮಾಡುತ್ತಾರೆ. ಇದನ್ನೂ ಸಹ ಇವರು ಗ್ರಾಮದ ಎಲ್ಲಾ ಮನೆಗಳಿಗೆ ಹೋಗಿ ಸುದ್ದಿ ಮುಟ್ಟಿಸುತ್ತಾರೆ. ಹ ಇದೊಂದು ಸುದ್ದಿ ಅಂತ ತಿಳಿದಿದ್ದೀರ ಖಂಡಿತವಾಗಿಯೂ ಅಲ್ಲ ಗ್ರಾಮದಲ್ಲಿ ಯಾವುದೆ ಜಾತ್ರೆ ಹಬ್ಬ ಹರಿದಿನ ಇರಲಿ ಅವುಗಳ ಸುದ್ದಿಯನ್ನು ತಿಳಿಸುವುದು ಜೊತೆಗೆ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಲು ಸಹ ಇವರ ಗಂಟೆ ನಾದ ಸಹಕಾರಿಯಾಗಿದೆ. ಈ ಹಿನ್ನೆಲೆ 150 ವರ್ಷಗಳ ಹಿಂದೆ ಈ ಗಂಟೆಯನ್ನು ಆಗ ಮಾದ್ಯಮ ಇಲ್ಲದ ವೇಳೆಯಲ್ಲಿ ಈ ಗಂಟೆಯನ್ನು ಊರಿನ ಜಹಗೀರದಾರರು ಇವರ ಮನೆತನಕ್ಕೆ ಈ ಗಂಟೆಯನ್ನು ದಾನವಾಗಿ ನೀಡಿದ್ದಾರೆ. ಇವರ ಅಜ್ಜನಿಂದ ಆರಂಭವಾದ ಈ ಘಂಟೆ ಸೇವೆ ಇವರ ತಂದೆ ಸಾವಿರಾರು ಕ್ರಾಂತಿಯ ಗೀತೆಗಳನ್ನು ಬರೆದ ಆಶುಕವಿ ಚಂದ್ರಪ್ಪ ಚಲವಾದಿ ನಂತರ ಇವರ ಹಿರಿಯ ಮಗ ಪಂಚಾಕ್ಷರಿ ಛಲವಾದಿ ಇವರುಗಳು ಈ ಕಾಯಕವನ್ನು ಮಾಡುತ್ತಾ ಬಂದಿದ್ದಾರೆ. ತಂದೆ ತೀರಿದ ನಂತರ ಮಗ ಪಂಚಾಕ್ಷರಿ ಪಂಚಾಕ್ಷರಿ ತೀರಿದ ನಂತರ ಈಗ ಷಡಕ್ಷರಿ ಈ ಸೇವೆಯನ್ನು ಮಾಡುತ್ತಾ ಈ ಕಾಯಕವನ್ನು ಮುಂದುವರೆಸಿದ್ದಾರೆ.

ಇಷ್ಟಕ್ಕೂ ಈ ಕಾಯಕದಿಂದ ಇವರಿಗೆ ಸರಕಾರ ವೇತನ ನೀಡುವುದಿಲ್ಲ. ಬದಲಾಗಿ ಗ್ರಾಮದ ರೈತರು ಬೆಳೆದ ಬೆಳೆಯನ್ನು ಅಲ್ಪಸ್ವಲ್ಪ ಹಣವನ್ನು ನೀಡುತ್ತಾರೆ ಇವರ ತಂದೆಯವರ ಬಗ್ಗೆ ಸ್ವಲ್ಪ ಹೇಳಲೇಬೇಕು ಇವರ ತಂದೆ ಚಂದ್ರಪ್ಪ ಛಲವಾದಿ ಸಾವಿರಾರು ಕ್ರಾಂತಿ ಗೀತೆಗಳನ್ನು ಬರೆದಿದ್ದಾರೆ ಬ್ರಿಟಿಷ್ ಕಾಲದಲ್ಲಿ ಜನರ ಬಾಯಿಂದ ಬಂದ ಶಬ್ದಗಳನ್ನು ಆಧಾರವಾಗಿಟ್ಟುಕೊಂಡು ಅವರು ಹಾಡುಗಳನ್ನು ಬರೆದಿದ್ದಾರೆ ಆ ಹಾಡುಗಳು ಕೆಲವು ಸಿನೆಮಾ ಹಾಡುಗಳಾಗಿವೆ ಗಂಡ ಧಾರವಾಡ ಜಿಲ್ಲಾದಾಗ ಪುಂಡ ಹುಟ್ಟಿದ ಸೋಮರಾಯಪ್ಪ ಗಂಡನೆನೆಸಿಕೊಂಡ ಬ್ರಿಟೀಷರಿಗೆಲ್ಲ ಧಾರವಾಡ ತಾಲೂಕು ಪೈಕಿ ಚಂದನಮಟ್ಟಿ ಗ್ರಾಮದಲ್ಲಿ ಶೂರನಾಗಿ ಮೆರಿತಿದ್ದ ಸುತ್ತಮುತ್ತೆಲ್ಲ ನಾ ಅನ್ನವರನಿವ ಕಾಲ ಮೆಟ್ಟಿ ಸೀಳತಿದ್ದ ಎಂಟು ದಿಕ್ಕಿಗೆ ಇವನ ಭುಜಪ್ರಭಲ. ಹುಲಿಯು ಹುಟ್ಟಿತು ಕಿತ್ತೂರ ನಾಡಾಗ ಭಂಟ ರಾಯಣ್ಣ ಸಂಗೊಳ್ಳಿ ಊರಾಗ ಸುಭಾಶ್ಚಂದ್ರ ಭೋಸ ಬಹದ್ದೂರ ಹಲ್ಲ ಕಡ್ಯಾವ ಬ್ರಿಟೀಷರಿಗೆ ಕರಕರ , ಕಿತ್ತೂರ ಚನ್ನಮ್ಮನ ಶೌರ್ಯ ಕಟ್ಯಾರಾಗಿಲ್ಲ ಸಂಸ್ಥಾನಿಕರೊಳಗ ಹೆಸರು ಹಿಂಗ್ಯಾರ ಉಳಸಿಲ್ಲ ಕಿತ್ತೂರ ರಾಣಿ ಚನ್ನಮ್ಮನ ಕುರಿತು ಸಾಕಷ್ಟು ಹಾಡುಗಳನ್ನು ಇವರು ಬರೆದಿದ್ದಾರೆ ಹುಬ್ಬಳ್ಳಿಯ ಶ್ರೀ ಗುರು ಸಿದ್ದಾರೂಢರ ಕುರಿತು ಇವರು ಹಾಡುಗಳನ್ನು ಬರೆದಿದ್ದಾರೆ, ಭಗತ್ ಸಿಂಗ್, ವಲ್ಲಭಭಾಯಿ ಪಟೇಲ್ ಮಹಾತ್ಮ ಗಾಂಧಿಯವರ ಬಗ್ಗೆ ಸೇರಿದಂತೆ ಈ ದೇಶದ ಮಹಾತ್ಮರ ಕುರಿತು ಹಾಡುಗಳನ್ನು ಬರೆದಿದ್ದಾರೆ ಇಂತಹ ಶ್ರೇಷ್ಠ ಕವಿಯ ಮನೆತನದಲ್ಲಿ ಈ ಗಂಟೆ ಸೇವೆ ಒಂದು ಜನಪದ ಕಲೆಯಾಗಿ 150 ವರ್ಷದಿಂದ ನಡೆದುಕೊಂಡು ಬಂದಿದೆ ಇಂದು ಮಾದ್ಯಮ ಶರವೇಗದಲ್ಲಿ ಇಡೀ ಪ್ರಪಂಚದ ಸುದ್ದಿಗಳನ್ನು ಜನರಿಗೆ ತಲುಪಿಸುತ್ತಿವೆ ಆದರೂ ಹುಬ್ಬಳ್ಳಿಯಲ್ಲಿ ಗಂಟೆಯ ಸುದ್ದಿ ತುಂಬಾ ಪ್ರಚಲಿತದಲ್ಲಿದೆ ಏಕೆಂದರೆ ಈ ಘಂಟೆಯ ಸುದ್ದಿಗೆ ಇತಿಹಾಸ ಇದೆ ಗ್ರಾಮದಲ್ಲಿ ಈ ಗಂಟೆಯ ಸಪ್ಪಳ ಆಗುವುದಷ್ಟೆ ತಡ ಮನೆಯ ಜನ ಹೊರಗೆ ಬಂದು ಏನಪ್ಪ ಸುದ್ದಿ ಅಂತ ಕೇಳುತ್ತಾರೆ, 2018 ರಲ್ಲಿ ಅಪ್ನಾದೇಶ ಶ್ರಮಿಕರತ್ನ ರಾಜ್ಯ ಪ್ರಶಸ್ತಿಯನ್ನು ಪಡೆದ ಇವರು ಯಾವುದೇ ಪ್ರಶಸ್ತಿ ಅಥವಾ ದುಡ್ಡಿಗಾಗಿ ಆಶೆ ಪಟ್ಟವರಲ್ಲ ಒಬ್ಬ ನಿವ್ರತ್ತ ಅಧಿಕಾರಿಯಾಗಿ ಈ ಕಾಯಕ ಮಾಡಬಾರದು ಅಂತ ಇವರಿಗೆ ಅನ್ಸಿಸಿಯೇ ಇಲ್ಲ ನಮ್ಮ ಮನೆತನಕ್ಕೆ ಇದು ಹಿಂದಿನ ಕಾಲದಿಂದಲೂ ಬಂದ ಬಳುವಳಿಯಾಗಿದೆ ಇದನ್ನು ನನ್ನ ಜೀವ ಇರುವವರೆಗೆ ಮುಂದುವರೆಸುವೆ ಅನ್ನುತ್ತಾರೆ.

ಪಂಚಾಕ್ಷರಿ ಇವರಿಗೆ ಒಬ್ಬಳೇ ಹೆಣ್ಣು ಮಗಳಿದ್ದು ಅವರು ಖಾಸಗಿ ಶಾಲೆಯಲ್ಲಿ ಶಿಕ್ಷಕೊಯಾಗಿ ಕೆಲಸ ನಿರ್ಹಿಸುತ್ತಿದ್ದಾರೆ ಇವರ ಮಡದಿ ಇವರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ, ಪ್ರತಿದಿನ ಈ ಗಂಟೆಯನ್ನು ತೊಳೆದು ಪೂಜಿಸಿ ಹೆಗಲಿಗೆ ಏರಿಸುತ್ತಾರೆ ಈ ನಮ್ಮ ಪಂಚಾಕ್ಷರಿ ಇವರಿಗೆ ಸ್ವಂತ ಜಮೀನಿದೆ ಜಮೀನಿನಲ್ಲಿ ಉತ್ತುವುದು ಬಿತ್ತುವುದು ಮಾಡುವುದರ ಜೊತೆಗೆ ಗ್ರಾಮದ ಸುದ್ದಿಗಳನ್ನು ಪಸರಿಸುವ ಕಾಯಕದಲ್ಲಿ ಇವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇಂದು ಪೇಸಬುಕ್ ವಾಟ್ಸ್ ಆಪ್ ಸಾಮಾಜಿಕ ಜಾಲತಾಣದ ಎಷ್ಟೊಂದು ಪ್ರಭಲವಾಗಿದೆ ಆದರೂ ಕೂಡ ಈ ಗ್ರಾಮದಲ್ಲಿ ಘಂಟೆಯ ಸುದ್ದಿ ತುಂಬಾ ಪ್ರಬಲವಾಗಿದೆ ಮತ್ತು ಪ್ರಾಮುಖ್ಯತೆಯನ್ನು ಪಡೆದಿದೆ. ಆದ್ದರಿಂದ ಇಂತಹ ಜನಪದ ಹಿನ್ನೆಲೆಯ ಈ ಕಲೆ ಉಳಿಯಬೇಕು ಬೆಳೆಯಬೇಕು ಅನ್ನುವುದು ನಮ್ಮ ಆಶಯವಾಗಿದೆ ಸುದ್ದಿ ಸೂರಪ್ಪನಿಗೆ ಇನ್ನಷ್ಟು ನಡೆದಾಡಲು ಶಕ್ತಿಯನ್ನು ನೀಡಲಿ ಈ ಘಂಟೆಯ ನೀನಾದ ಕೊನೆಯವರೆಗೂ ಉಳಿಯಲಿ ಬೆಳೆಯಲಿ ಅನ್ನುವುದು ನಮ್ಮ ಆಶಯವಾಗಿದೆ. ಎಲ್ ಐ ಲಕ್ಕಮ್ಮನವರ ಧಾರವಾಡ.