ಬೆಂಗಳೂರು(ಜೂನ್.14) ರಾಜ್ಯ ಸರ್ಕಾರವು ಶಾಲಾ ವಿದ್ಯಾರ್ಥಿಗಳ BMTC ಬಸ್ ಪಾಸ್ ದರವನ್ನು ಏರಿಕೆ ಮಾಡಿದ್ದು, ನೂತನ ನವೀಕರಣ ದರವನ್ನು ಪ್ರಕಟಿಸಿದೆ.

ನೂತನ ನವೀಕರಣ ದರವು ರೂ. 100ರಿಂದ 250ರೂ.ವರೆಗೆ ಏರಿಕೆಯನ್ನು ಮಾಡಿದೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಬಸ ಪಾಸ್ ದರ ಈ ಹಿಂದೆ ರೂ.170 ಇತ್ತು. ಈಗ ರೂ.30 ಏರಿಕೆ ಕಂಡು 200 ರೂ.ಗೆ ಪಾಸ್ ದರ ಏರಿಕೆ ಕಂಡಿದೆ.

ಪ್ರೌಡಶಾಲಾ ಬಾಲಕಿ ವಿದ್ಯಾರ್ಥಿಗಳ ಬಸ್ ಪಾಸ್ ದರ ಈ ಹಿಂದೆ ರೂ.670 ಇತ್ತು. ಈ ದರವು 30ರೂ. ಏರಿಕೆಯಾಗಿ 700ರೂ. ಗೆ ಏರಿಕೆಯಾಗಿದೆ.
ಪ್ರೌಡಶಾಲಾ ಬಾಲಕರ ಬಸ್ ಪಾಸ್ ದರ ಮೊದಲು 870 ರೂ.ಇತ್ತು. ಅದು ಈಗ 30ರೂ. ಏರಿಕೆಯಾಗಿ 900ರೂ.ಗೆ ಏರಿಕೆಯಾಗಿದೆ.

ಪಿಯುಸಿ ವಿದ್ಯಾರ್ಥಿಗಳ ಬಸ್ ಪಾಸ್ ಮೊದಲು 1220ರೂ. ಇತ್ತು. ಇದೀಗ 1250 ರೂ.ಗೆ ಏರಿಕೆಯಾಗಿದೆ.

ಪದವಿ/ಸ್ನಾತಕೋತ್ತರ ವಿದ್ಯಾರ್ಥಿಗಳ ಪಾಸ್ ದರ 2,090 ರಿಂದ 2120 ರೂ.ಗೆ ಏರಿಕೆಯಾಗಿದೆ. ವೃತ್ತಿಪರ ವಿದ್ಯಾರ್ಥಿಗಳ ಪಾಸ್ ದರ 1570ರಿಂದ 1600 ರೂ.ಗೆ ಏರಿಕೆಯಾಗಿದೆ.

ಒಟ್ಟಾರೆಯಾಗಿ BMTC ಎಲ್ಲಾ ವಿದ್ಯಾರ್ಥಿಗಳ ಬಸ್ ಪಾಸ್ ದರವನ್ನು ರೂ.30ಕ್ಕೆ ಏರಿಕೆಯನ್ನು ಮಾಡಿದೆ.