ವಿಶ್ವಸಂಸ್ಥೆ:(ಫೆ28): ಜೈಷ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥನಾದ ಮಸೂದ್ ಅಜರ್ ಬಾಕ್ಲ್ ಲೀಸ್ಟ್ ಸೇರಿಸುವಂತೆ ವಿಶ್ವದ ಪ್ರಬಲ ರಾಷ್ಟ್ರಗಳು ವಿಶ್ವಸಂಸ್ಥೆಯಲ್ಲಿ ಒತ್ತಾಯಿಸಿದ್ದಾವೆ.

ವಿಶ್ವದ ಪ್ರಬಲ ರಾಷ್ಟ್ರಗಳಾದ ಅಮೇರಿಕಾ, ಇಂಗ್ಲೆಂಡ್, ಪ್ರಾನ್ಸ್ ದೇಶಗಳು ಭಾರತದ ಸಪೋರ್ಟ್‍ಗೆ ನಿಂತಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈ ಮೂರು ದೇಶಗಳ ರಾಜತಾಂತ್ರಿಕರು ಜೈಷ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‍ಗೆ ನಿರ್ಬಂಧ ವಿಧಿಸುವಂತೆ ಒತ್ತಾಯಿಸಿದ್ದಾವೆ.

ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಪಾಕ್‍ನ ಬಾಲಾಕೋಟ್‍ನಲ್ಲಿರುವ ಉಗ್ರರರ ಕ್ಯಾಂಪ್‍ಗಳನ್ನು ಭಾರತ ಧ್ವಂಸಗೊಳಿಸಿತ್ತು. ಇದಕ್ಕೆ ಪಾಕ್ ಪ್ರತಿಕಾರ ತೀರಿಸುವ ಸಲುವಾಗಿ ಪಾಕ್ ಯುದ್ಧ ವಿಮಾನಗಳು ಭಾರತದೊಳಗೆ ನುಸುಳಿದ ವೇಳೆ ಭಾರತದ ಯುದ್ಧ ವಿಮಾನ ಪಾಕ್‍ನ ಎಫ್-16 ಯುದ್ಧ ವಿಮಾನವನ್ನು ಉಡೀಸ್ ಮಾಡಲಾಗಿದೆ. ಆದರೆ ಈ ವೇಳೆ ಪಾಕ್ ಭಾರತೀಯ ಪೈಲೆಟ್ ಅಭಿನಂದನ್ ವರ್ಥಮಾನ್ ಅವರನ್ನು ಸೆರೆಹಿಡಿದಿದ್ದು, ಭಾರತ ಅವರನ್ನು ತಕ್ಷಣ ಸುರಕ್ಷಿತವಾಗಿ ಬಿಡುವಂತೆ ಆಗ್ರಹಿಸಿದೆ. ಇನ್ನು ಈಗಿನ ಪರಿಸ್ಥಿತಿಯಲ್ಲಿ ಭಾರತ ಹಾಗೂ ಪಾಕ್ ಶಾಂತಿ ಮಾತುಕತೆಗೆ ನೆರವಾಗುವುದಾಗಿ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಹೇಳಿದ್ದಾರೆ.