ಬೆಂಗಳೂರು(ಅ.27)ಕರೋನ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದ ವ್ಯಕ್ತಿಗೆ 250 ರೂ. ದಂಡ ವಿಧಿಸುವಂತೆ ಬಿಬಿಎಂಪಿ ಮಾರ್ಷಲ್ ಗಳಿಗೆ ಆದೇಶ ನೀಡಿದ್ದು, ದಿನಕ್ಕೆ 20 ಕೇಸ್ ಗಳ ಟಾರ್ಗೆಟ್ ನೀಡಲಾಗಿದೆ.

ರಾಜ್ಯ ಸರ್ಕಾರವು ದಿನಕ್ಕೆ ಮಾಸ್ಕ್ ಹಾಕದೇ ಓಡಾಡುವ 20 ಜನರಿಗೆ ದಂಡ ವಿಧಿಸಲೇಬೇಕೆಂದು ಮಾರ್ಷಲ್ ಗಳಿಗೆ ಟಾರ್ಗೆಟ್ ನೀಡಿದೆ. ಮಾಸ್ಕ್ ಹಾಕದವರಿಂದ, ಸಾಮಾಜಿಕ ಅಂತರ ಕಾಪಾಡದವರಿಂದ 250 ರೂ. ದಂಡ ವಸೂಲಿ ಮಾಡಬೇಕು. ಟಾರ್ಗೆಟ್ ರೀಚ್ ಆಗ್ಲಿಲ್ಲ ಅಂದ್ರೆ ವಿಪತ್ತು ನಿರ್ವಹಣಾ ಕಾಯಿದೆ 2005 ರ ಅಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಸರ್ಕಾರವು ಟಾರ್ಗೆಟ್ ನೀಡಿದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಮಾರ್ಷಲ್​ಗಳು ಫೀಲ್ಡಿಗಿಳಿದಿದ್ದಾರೆ. ಬೆಳಗ್ಗೆ 7 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದಾರೆ.