ಬೆಂಗಳೂರು(ಸೆ.೨೦) ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮಾತಿನ ಮಲ್ಲ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮಜಾ ಟಾಕೀಸ್ ಮೂಲಕ ನಿತ್ಯ ಮನೆ ಮನ ಗೆದ್ದಿರುವ ಈ ನಟ ಎಲ್ಲಿದ್ದೆ ಇಲ್ಲಿತನಕ ಅನ್ನೋ ಸಿನಿಮಾ ಮಾಡ್ತಿರೋ ವಿಷ್ಯ ನಿಮಗೆಲ್ಲಾ ಗೊತ್ತಿದೆ. ಹಾಗೆ ನೋಡಿದ್ರೆ ಈ ಚಿತ್ರದ ಟೈಟಲ್‍ಗೂ ಸೃಜನ್ ತಂದೆ ಲೋಕೇಶ್ ಚಿತ್ರವೊಂದಕ್ಕೂ ನಂಟಿದೆ ಅನ್ನೋದೂ ನಿಮಗೆ ಗೊತ್ತು.

ಚಿತ್ರ ಹಲವು ವಿಚಾರಗಳಿಂದ ಸುದ್ದಿಯಲ್ಲಿದೆ. ನಟಿ ಹರಿಪ್ರಿಯಾ ಈ ಚಿತ್ರದ ನಾಯಕಿ. ಚಿತ್ರೀಕರಣ ಭರದಿಂದ ಸಾಗಿದೆ. ಸಾಕಷ್ಟು ಸ್ಟಾರ್‍ಗಳು ಚಿತ್ರದ ಕುರಿತು ಒಂದಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಸೃಜನ್ ಅಭಿಮಾನಿಗಳು ಚಿತ್ರಕ್ಕೆ ಕಾಯ್ತಿರೋದು ಸುಳ್ಳಲ್ಲ. ಹರಿಪ್ರಿಯಾ ಅಭಿಮಾನಿಗಳೂ ಈ ಚಿತ್ರಕ್ಕೆ ವೇಟ್ ಮಾಡ್ತಿದ್ದಾರೆ.
ವಿಷ್ಯ ಇಷ್ಟೇ ಅಲ್ಲ. ಈಗ ಸೃಜನ್ ಮತ್ತು ಹರಿಪ್ರಿಯಾ ಚಿತ್ರದ ಸೀನ್ ಒಂದರಲ್ಲಿ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದಾರೆ. ಹಾಗೆ ನೋಡಿದ್ರೆ ಲಿಪ್ ಲಾಕ್ ಅನ್ನೋದು ಬಾಲಿವುಡ್ ಮಟ್ಟಿಗೆ ತೀರಾ ಸಾಮಾನ್ಯ. ದಕ್ಷಿಣ ಭಾರತದ ಚಿತ್ರರಂಗಕ್ಕೆ ಇದು ತೀರಾ ಹೊಸತು. ಚಿತ್ರಕ್ಕೆ ಅನಿವಾರ್ಯ ಅಂದ್ರೆ ಮಾತ್ರ ಇಂಥ ಸನ್ನಿವೇಶಗಳನ್ನು ಚಿತ್ರೀಕರಿಸಲಾಗುತ್ತೆ.

ಕನ್ನಡದ ರಶ್ಮಿಕಾ ಮಂದಣ್ಣ ಕೇವಲ ಒಂದು ಲಿಪ್ ಲಾಕ್ ಸೀನ್‍ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದರು. ಅದಾದ ಮೇಲೆ ಬ್ಯಾಕ್ ಟು ಬ್ಯಾಕ್ ಲಿಪ್‍ಲಾಕ್ ಸೀನ್‍ಗಳು ಕಾಣಿಸಿಕೊಂಡಿದ್ದರಿಂದ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದೂ ಆಯ್ತು. ಇದಕ್ಕೆ ನಟ ವಿಜಯ್ ದೇವರಕೊಂಡ ಚಿತ್ರಕ್ಕೆ ಆ ಸೀನ್ ಅವಶ್ಯಕವಾಗಿದ್ದರಿಂದ ಹಾಗೆ ನಟಿಸಬೇಕಾಯ್ತು, ಇನ್ಮೇಲೆ ಇಂಥ ಸೀನ್‍ಗಳಲ್ಲಿ ಆಕ್ಟ್ ಮಾಡಲ್ಲ ಅಂತ ಹೇಳಿದ್ದರು. ಈಗ ಕನ್ನಡದ ಚಿತ್ರದಲ್ಲಿ ಹರಿಪ್ರಿಯಾ ಸೃಜನ್ ಜೊತೆ ಲಿಪ್ ಲಾಕ್ ಮಾಡಿದ್ದಾರೆ. ಆ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಈ ಸುದ್ದಿಯಿಂದಾಗಿ ಅಭಿಮಾನಿಗಳು ಯಾವ ರೀತಿ ರಿಯಾಕ್ಟ್ ಮಾಡ್ತಾರೋ ಕಾದು ನೋಡಬೇಕಿದೆ.