ಮುಂಬೈ(ಜ.16): ತನ್ನ ಕಣ್ ಸನ್ನೆಯಿಂದಲೆ ಹುಡುಗರ ನಿದ್ದೆ ಕೆಡಿಸಿ, ನ್ಯಾಷನಲ್ ಕ್ರಶ್ ಅಂತಾನೆ ಫೇಮಸ್ ಆಗಿರುವ ನಟಿ ಪ್ರಿಯಾ ವಾರಿಯರ್ ವಿರುದ್ಧ ಶ್ರೀದೇವಿ ಪತಿ ಬೋನಿ ಕಪೂರ್ ನೋಟಿಸ್ ಜಾರಿ ಮಾಡಿದ್ದಾರೆ.

ಪ್ರಿಯಾ ‘ಶ್ರೀದೇವಿ ಬಂಗ್ಲೊ’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಡುತ್ತಿದ್ದಾರೆ. ಸದ್ಯ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇದನ್ನು ನೋಡಿದ ಭೋನಿ ಫುಲ್ ಅಪಸೆಟ್ ಆಗಿದ್ದಾರೆ. ಅಷ್ಟಕ್ಕೂ ಬೋನಿ ಪ್ರಿಯಾ ವಿರುದ್ಧ ಗರಂ ಆಗಲು ಕಾರಣ ಏನು ಗೊತ್ತಾ?

ರಿಲೀಸ್ ಆಗಿರುವ ಟೀಸರ್‍ನ ಕೊನೆಯ ಕೆಲ ಸೆಕೆಂಡ್‍ಗಳಲ್ಲಿ ನಟಿ ಪ್ರಿಯಾ ಬಾತ್ ಟಬ್‍ನಲ್ಲಿ ಆಕಸ್ಮಿವಾಗಿ ಮುಳುಗಿ ಸಾಯುತ್ತಿರುವ ದೃಶ್ಯ ಇದೆ. ಈ ದಶ್ಯ ಕಳೆದ ವರ್ಷ ಬಾತ್ ಟಬ್‍ನಲ್ಲಿ ಬಿದ್ದು ಕೊನೆಯುಸಿರೆಳೆದ ಶ್ರೀದೇವಿಯ ಘಟನೆ ಹೋಲುವಂತಿದೆ, ಎಂದು ಬೋನಿ ಕಪೂರ್ ಚಿತ್ರತಂಡಕ್ಕೆ ನೋಟಿಸ್ ನೀಡಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀದೇವಿ ಬಂಗ್ಲೊ ಚಿತ್ರದ ನಿರ್ದೇಶಕ ಪ್ರಶಾಂತ್ ಮಾಬುಲೆ, ನಾವು ಇದನ್ನು ಕೋರ್ಟ್‍ನಲ್ಲೇ ಬಗೆಹರಿಸಿಕೊಳ್ಳುತ್ತೇವೆ ಈ ಚಿತ್ರ ಶ್ರೀದೇವಿ ಅವರ ಬಯೋಪಿಕ್ ರೀತಿಯಲ್ಲಿದೆ ಎನ್ನುವುದನ್ನು ಒಪ್ಪಿಕೊಳ್ಳಲು ಅವರು ನಿರಾಕರಿಸಿದ್ದಾರೆ.

ಒಟ್ಟಾರೆ ಬಾಲಿವುಡ್ ಎಂಟ್ರಿಗೆ ಎದುರು ನೋಡುತ್ತಿದ್ದ ಪ್ರಿಯಾ ವಾರಿಯರ್‍ಗೆ ಆರಂಭದಲ್ಲಿಯೇ ಆಘಾತವಾಗಿದೆ.