ಬೆಂಗಳೂರು:(ಜ22): ಶ್ರೀಗಳ ಅಂತಿಮ ಕ್ರಿಯಾ ಸಮಾಧಿಯನ್ನು ಇಬ್ಬರು ಸ್ವಾಮೀಜಿಗಳು ನೆರವೇರಿಸಿ ಕೊಡಲಿದ್ದಾರೆ.

ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ಯ ನಂತರ ಸುಮಾರು ಐದು ಗಂಟೆಯ ವೇಳೆ ಅಂತಿಮ ಕ್ರಿಯಾ ಸಮಾಧಿ ನೆರವೇರಲಿದೆ.

ವಿಭೂತಿ ಗಟ್ಟೆಗಳ ಮೂಲಕ ಶ್ರೀಗಳ ಕ್ರಿಯಾ ಸಮಾಧಿಯನ್ನು ಮುಚ್ಚಲಾಗುತ್ತದೆ. 900 ಕೆಜಿ ಉಪ್ಪುˌ 50 ಕೆಜಿ ಮರಳುˌ ಒಂದು ಮೂಟೆ ಬಿಲ್ವಪತ್ರೆˌ 10ˌ000 ವಿಭೂತಿ ಗಟ್ಟಿ ಬಳಸಲಾಗುತ್ತಿದೆ.

ಈಗಾಗಲೇ ಹತ್ತು ಲಕ್ಷಕ್ಕೂ ಹೆಚ್ಚು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದಿದ್ದುˌ ಇನ್ನೂ ನೂಕುನುಗ್ಗಲು ಹೆಚ್ಚಾಗುತ್ತಿದೆ.