ಧಾರವಾಡ(ಜೂನ್.15) ಹುಬ್ಬಳ್ಳಿಯಲ್ಲಿ ಮಂಡ್ಯ ಸಂಸದೆ ಸುಮಲತಾ ಮತ್ತು ಪುತ್ರ ಅಭಿಷೇಕ್ ರಿಂದ ಹಾಲು ಮತ್ತು ತುಪ್ಪದ ತುಲಾಭಾರ ಸೆವೆಯನ್ನು ಮಾಡಲಾಯಿತು.

ಪುರಾಣ ಪ್ರಸಿದ್ಧ ನುಗ್ಗಿಕೆರೆ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆ ಹಾಲು ಮತ್ತು ತುಪ್ಪದ ತುಲಾಭಾರವನ್ನು ಮಾಡಲಾಯಿತು. ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವು ಮತ್ತು ಅಭಿಷೇಕ್ ಅವರ ಅಮರ್ ಚಿತ್ರದ ಗೆಲುವಿಗಾಗಿ ಅಭಿಮಾನಿಗಳು ಈ ಸೇವೆಯನ್ನು ಮಾಡಿದರು.

ಅಭಿಷೇಕ್ ಅವರು 100 ಕೆ.ಜಿ. ಸಕ್ಕರೆ, 15 ಕೆ.ಜಿ. ತುಪ್ಪ ಮತ್ತು ಸುಮಲತಾ 75 ಕೆ.ಜಿ. ಸಕ್ಕರೆ, 15 ಕೆ.ಜಿ. ತುಪ್ಪದ ತುಲಾಭಾರ ಸೇವೆಯನ್ನು ಸಲ್ಲಿಸಿದರು.

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ನಾವು ಇದೇ ಮೊದಲ ಬಾರಿಗೆ ತುಲಾಭಾರ ಸೇವೆಯಲ್ಲಿ ಭಾಗವಹಿಸುತ್ತಿದ್ದೇವೆ. ಲೋಕಸಭಾಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಹಲವರು ಹರಕೆ ಹೊತ್ತಿದ್ದರು. ಏಳು ವರ್ಷಗಳ ಹಿಂದೆ ಹುಬ್ಬಳ್ಳಿ-ಧಾರವಾಡಕ್ಕೆ ನಾನು ಬಂದಿದ್ದೆ. ಈಗ ಮತ್ತೆ ಬರುವ ಅವಕಾಶ ಬಂದಿದೆ ಎಂದರು.
ಅಂಬರೀಶ್ ಅಭಿಮಾನಿ ಉದ್ಯಮಿ ನಾರಾಯಣ ಕುಲಾಲ್ ತುಲಾಭಾರ ಆಯೋಜಿಸಿದ್ದರು.