ಬೆಂಗಳೂರು(ಜುಲೈ.29) ವಿಧಾನಸಭಾ ಸ್ಪೀಕರ್‌ ಸ್ಥಾನಕ್ಕೆ ರಮೇಶ್‌ ಕುಮಾರ್‌ ಅವರು ಇಂದು ರಾಜೀನಾಮೆಯನ್ನು ನೀಡಿದ್ದಾರೆ. ಸದನದಲ್ಲಿ ತಮ್ಮ ರಾಜೀನಾಮೆಯ ಬಗ್ಗೆ ತಿಳಿಸಿದ ಅವರು ಮಾತನಾಡುತ್ತ ಸ್ಪೀಕರ್‌ ಸ್ಥಾನಕ್ಕೆ ತಾವು ಹೇಗೆ ಆಯ್ಕೆ ಆದರು ಎನ್ನುವುದರ ಬಗ್ಗೆ ಮಾಹಿತಿ ನೀಡಿದರು.

ಸದನದಲ್ಲಿ ಮುಂದುವರೆದು ಮಾತನಾಡಿದ ಅವರು ಸ್ಪೀಕ‌ರ್‌ ಆಗಿದ್ದ ವೇಳೆಯಲ್ಲಿ ಏನಾದ್ರು ತಪ್ಪುಗಳು ಆಗಿದ್ದರೆ ನಾನು ಕ್ಷಮೆಯನ್ನು ಕೋರುತ್ತೇನೆ ಎಂದು ಹೇಳಿದರು. ಇನ್ನು ತಮಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಸದನದ ಸದ್ಯಸರಿಗೆ ಜನಸೇವೆ ಮಾಡುವ ಬಗ್ಗೆ ಕಿವಿ ಮಾತು ಹೇಳಿದರು. ನಾನು ನನ್ನ ಆತ್ಮ ಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ, ನನ್ನ ವಿರೋಧ ಮಾಡುವವರನ್ನು ನಾನು ಗೌರವಿಸುವೆ, ನನ್ನ ಗೌರವಿಸುವವರನ್ನು ನಾನು ಗೌರವಿಸುವೆ ಎರಡನ್ನು ನಾನು ಸಮಾನವಾಗಿ ಗೌರವಿಸುವೆ ಎಂದು ಹೇಳಿದರು.

ಈ ದೇಶದ ಭ್ರಷ್ಟಾಚಾರದ ಮೂಲ ಚುನಾವಣೆಗಳಾಗಿದ್ದಾವೆ ಎಂದು ಬೇಸರ ವ್ಯಕ್ತಪಡಿಸಿದರು. ಚುನಾವಣೆಗಳು ಸುಧಾರಣೆಯಾಗದ ಹೊರತು ಭ್ರಷ್ಟಾಚಾರ ಸುಧಾರಿಸುವುದಿಲ್ಲ ಅಂತ ಹೇಳಿದರು. ಲೋಕಾಯುಕ್ತ ಕಾನೂನು ಸಹ ಸುಧಾರಣೆಯಾಗಬೇಕು ಎಂದು ಹೇಳಿದರು.