ನವದೆಹಲಿ(ಡಿ.19): ಆರು ವರ್ಷದಿಂದ ಗೂಢಚಾರಿಕೆ ಆರೋಪದ ಮೇಲೆ ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿದ್ದ ಮುಂಬೈ ಎಂಜಿನಿಯರ್ ಹಮೀದ್ ಅನ್ಸಾರಿ ಭಾರತಕ್ಕೆ ಮರಳಿದ್ದಾರೆ.

ಮಂಗಳವಾರ ಹಮೀದ್ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‍ರನ್ನು ಭೇಟಿ ಮಾಡಿ ಕೈಹಿಡಿದು ಕಣ್ಣೀರು ಹಾಕಿದ್ದಾರೆ.

2012 ರಲ್ಲಿ ನಕಲಿ ಗುರುತಿನ ಚೀಟಿ ಹೊಂದಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು. 2015ರ ಡಿಸೆಂಬರ್ 15 ರಂದು ವಿಚಾರಣೆ ನಡೆಸಿ ಅವರಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿತ್ತು.

ಪಾಕಿಸ್ತಾನದ ಕೋರ್ಟ್ ಅನ್ಸಾರಿಗೆ ಅಕ್ರಮವಾಗಿ ದೇಶ ನಸುಳಿದ್ದು, ದೇಶ ವಿರೋಧಿ ಚಟುವಟಿಕೆ ನಕಲಿ ದಾಖಲೆಗಳ ಆರೋಪದ ಮೇಲೆ ಶಿಕ್ಷೆ ವಿಧಿಸಲಾಗಿತ್ತು.