ಮುಂಬೈ(ಅ.14)ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಸೌರವ್ ಗಂಗೂಲಿ ಅವರನ್ನು ಒಮ್ಮತವಾಗಿ ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ.

ಬಿಸಿಸಿಐ ಅಧ್ಯಕ್ಷರಾದ ಬಳಿಕ ಮೊದಲ ಪ್ರತಿಕ್ರಿಯೆಯನ್ನು ಗಂಗೂಲಿ ನೀಡಿದ್ದು, ಬಿಸಿಸಿಐ ಅಧ್ಯಕ್ಷನಾಗಿ ಸೇವೆಯನ್ನು ಸಲ್ಲಿಸುವುದು ನನಗೆ ಶ್ರೇಷ್ಠ ಅವಕಾಶ. ಭಾರತ ತಂಡದ ನಾಯಕನಾಗಿ ಸೇವೆಯನ್ನು ಸಲ್ಲಿಸಿದ್ದೇನೆ. ಈಗ ಬಿಸಿಸಿಐ ಅಧ್ಯಕ್ಷನಾಗಿರುವುದು ತುಂಬಾ ಸಂತಸವನ್ನು ತಂದಿದೆ. ಬಳಿಕ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿರುವ ಕ್ರಿಕೆಟಿಗರ ಆರ್ಥಿಕ ಸ್ಥಿತಿಗತಿ ಉತ್ತಮ ಪಡಿಸಿವುದು ನನ್ನ ಮೊದಲ ಕೆಲಸ ಎಂದು ಪ್ರತಿಕ್ರಿಯೆ ನೀಡಿದರು.