ಬೆಳಗಾವಿ(ಸೆ.09) ಪಬ್ ಜಿ ಗೇಮ್ ಇತ್ತೀಚೆಗೆ ಭಾರತ ಸೇರಿ ವಿಶ್ವದಾದ್ಯಂತ ಭಾರೀ ಜನಪ್ರಿಯವಾಗಿದೆ. ಪಬ್ ಜೀ ಗೇಮ್ ಹುಚ್ಚಿನಿಂದ ಯುವಕನೊಬ್ಬ ತನ್ನ ತಂದೆಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿಯ ಕಾಕತಿಯ ಸಿದ್ದೇಶ್ವರ ನಗರದಲ್ಲಿ ನಡೆದಿದೆ.

ರಘುವೀರ್ ಕುಂಬಾರ ಎನ್ನುವ 25 ವರ್ಷದ ಯುವಕ ತನ್ನ ತಂದೆಯನ್ನೇ ಕೊಲೆ ಮಾಡಿದ್ದಾನೆ. ಶಂಕ್ರಪ್ಪ ಕುಂಬಾರ ಎನ್ನುವ ಹತ್ಯೆಗೊಳಗಾದ ದುರ್ದೈವಿ. ನಿನ್ನೆ ರಾತ್ರಿ ರಘುವೀರ್ ಪಬ್ ಜಿ ಆಡುತ್ತಿದ್ದಾಗ ನೆಟ್ ಪ್ಯಾಕ್ ಖಾಲಿ ಆಗಿದೆ. ರೀಚಾರ್ಜ್ ಮಾಡಿಸಲು ತಂದೆ ಶಂಕ್ರಪ್ಪ ಹಣ ಕೇಳಿದ್ದಾನೆ, ಅದಕ್ಕೆ ಅವರು ಕೊಟ್ಟಿರುವಿದಿಲ್ಲ. ಇದೇ ಕಾರಣಕ್ಕೆ ಕೋಪಗೊಂಡ ರಘುವೀರ್ ತಾಯಿಯನ್ನು ರೂಮ್ ನಲ್ಲಿ ಕೂಡಿ ಹಾಕಿ ತಂದೆಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಇಂದು ಬೆಳಗ್ಗೆ ಅಕ್ಕಪಕ್ಕದ ಜನರು ಘಟನೆಗೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾಕತಿ ಪೊಲೀಸರು ಸ್ಥಳಕ್ಕೆ ಬಂದು ರಘುವೀರ್ ನನ್ನು ವಶಕ್ಕೆ ಪಡೆದಿದ್ದಾರೆ.