ನವದೆಹಲಿ(ಫೆ:15): ಭಾರತ-ನ್ಯೂಜಿಲ್ಯಾಂಡ್ ನಡುವೆ ನಡೆದ ಮೂರನೇ ಟಿ 20 ಪಂದ್ಯದಲ್ಲಿ ಭಾರತ 4 ರನ್ ಗಳ ಸೋಲು ಕಂಡು ಕಿವೀಸ್ ನೆಲದಲ್ಲಿ ಐತಿಹಾಸಿಕ ಗೆಲುವು ಸಾಧಿಸುವ ಭಾರತದ ಕನಸು ಕನಸಾಗಿಯೇ ಉಳಿಯಿತು. ಈ ನಡುವೆ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ದಿನೇಶ್ ಕಾರ್ತಿಕ್ ಎಂದು ಹೇಳಲಾಗುತ್ತಿತ್ತು.

ಕಾರ್ತಿಕ್ ವಿರುದ್ಧ ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಆಕ್ರೋಶಭರಿತ ಕಾಮೆಂಟ್ ಮಾಡಿದ್ದರು. ಅದರಲ್ಲೂ ಕೊನೆಯ ಬಾಲ್ ಗೆ ಮ್ಯಾಚ್ ಫಿನಿಷ್ ಮಾಡಲು ನೀವೇನು ಎಂ ಎಸ್ ಧೋನಿ ಎಂದುಕೊಂಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಹೀಗೆ ಹಲವಾರು ನೆಗೆಟಿವ್ ಕಾಮೆಂಟ್ಸ್ ಬಂದಿದ್ದವು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾರ್ತಿಕ್ ‘ನಾನು ಮತ್ತು ಕ್ರುನಾಲ್ ಪಾಂಡ್ಯ ಉತ್ತಮವಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದೆವು,ಅಂದು ನನಗೆ ಸಿಕ್ಸರ್ ಭಾರಿಸುವ ಆತ್ಮವಿಶ್ವಾಸವಿತ್ತು,ಆದ್ದರಿಂದ ನಾನು ಸಿಂಗಲ್ ರನ್ ಪಡೆಯಲು ನಿರಾಕರಿಸಿದೆ. ಹಾಗೆಯೇ ಕೆಲವು ಬಾರಿ ನಾವು ಅಂದುಕೊಂಡಂತೆ ನಡೆಯುವುದಿಲ್ಲ,ಇಲ್ಲಿ ಬೌಲರ್ ಟಿಮ್ ಸೌಧಿ ಉತ್ತಮ ಬೌಲಿಂಗ್ ಪ್ರದರ್ಶಿಸಿದರು,ಅವರಿಂದ ಒಂದು ಸಣ್ಣ ತಪ್ಪಾಗಿದ್ದರೂ ಗೆಲುವು ನಮ್ಮದಾಗುತ್ತಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.