ನವದೆಹಲಿ:(ಫೆ21); ಐದು ಜನ ಯೋಧರು ಹಿಮಪಾತದಲ್ಲಿ ಸಿಲುಕಿದ್ದು, ಯೋಧರನ್ನು ರಕ್ಷಿಸುವ ಕಾರ್ಯ ಮುಂದುವರೆದಿದೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಹಿಮಪಾತ ಸಂಭವಿಸಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.ಈ ಘಟನೆಯಲ್ಲಿ ಯೋಧರೊಬ್ಬರು ಮಡಿದಿದ್ದಾರೆ.

ಈಗಾಗಲೇ ಹಿಪಾತದಲ್ಲಿ ಸಿಲುಕಿದ ಹಲವಾರು ಯೋಧರನ್ನು ರಕ್ಷಿಸಿದ್ದು, ಇನ್ನು ಹಿಮಪಾತದಲ್ಲಿ ಸಿಲುಕಿರುವ ಐದು ಜನ ಯೋಧರನ್ನು ಹುಡುಕುವ ಕಾರ್ಯ ಮುಂದುವರೆದಿದೆ.

ಯೋಧರ ರಕ್ಷಣಾ ಕಾರ್ಯದಲ್ಲಿ 250 ಕ್ಕೂ ಹೆಚ್ಚಿನ ಯೋಧರು ಭಾಗಿಯಾಗಿದ್ದು, ಹುಡುಕಾಟದ ಕಾರ್ಯ ಮುಂದುವರೆದಿದೆ. ಇಂಡೊ-ಚೀನಾದ ಗಡಿ ಪ್ರದೇಶದ ಶಿಪ್ಕಿ ಲಾ ವಲಯದಲ್ಲಿ ಹದಿನಾರು ಯೋಧರ ಎರಡು ತಂಡಗಳನ್ನು ಗಸ್ತು ತಿರುಗಲು ನಿಯೋಜಿಸಲಾಗಿತ್ತು ಈ ವೇಳೆ ಈ ಘಟನೆ ಸಂಭವಿಸಿದೆ.

ಇನ್ನು ಉಷ್ಣಾಂಶ-15 ಡಿಗ್ರಿ ತಲುಪಿರುವ ಕಾರಣ ರಕ್ಷಣಾ ಕಾರ್ಯದ ವೇಳೆ ಅಡ್ಡಿ ಉಂಟಾಗುತ್ತಿದೆ ಎಂದು ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಪಡೆ ತಿಳಿಸಿದ್ದಾರೆ. ಹಿಮಪಾತದಲ್ಲಿ ಸಿಲುಕಿರುವ ಎಲ್ಲಾ ಯೋಧರನ್ನು ಪತ್ತೆ ಹಚ್ಚುವವರೆಗೂ ಶೋಧ ಕಾರ್ಯ ಮುಂದುವರೆಯುತ್ತದೆ ಎನ್ನಲಾಗಿದೆ.