ಮಂಡ್ಯ:(ಫೆ26): ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಗೆ ಮಂಡ್ಯದ ಯೋಧ ಗುರು ಅವರು ದೇಶಕ್ಕಾಗಿ ಪ್ರಾಣವನ್ನು ಬಿಟ್ಟಿದ್ದರು. ಇಂದು ಅವರ ಹನ್ನೊಂದನೆಯ ತಿಥಿ ಕಾರ್ಯ. ಇಂದೇ ಭಾರತೀಯ ಸೇನೆ ಉಗ್ರರ ನೆಲೆಗಳನ್ನು ದ್ವಂಸಗೊಳಿಸಿದೆ.

ಇನ್ನು ಯೋಧ ಗುರು ಅವರ ತಿಥಿ ಕಾರ್ಯಕ್ಕೆ ಸಾವಿರಾರು ಜನರು ಭಾಗವಹಿಸಿದ್ದು, ಗುರು ಅವರ ಅಂತ್ಯ ಸಂಸ್ಕಾರ ಮಾಡಿದ ಸ್ಥಳದಲ್ಲಿಯೇ ತಿಥಿ ಕಾರ್ಯ ಮಾಡಲಾಗುತ್ತಿದೆ. ಈ ಕಾರ್ಯದ ಸಂಪೂರ್ಣ ಜವಬ್ದಾರಿಯನ್ನು ಸಾರಿಗೆ ಸಚಿವರಾದ ಡಿ.ಸಿ ತಮ್ಮಣ್ಣ ವಹಿಸಿಕೊಂಡಿದ್ದಾರೆ.

ಯೋಧ ಗುರು ಅವರ ಸಮಾಧಿಯನ್ನು ಹೂಗಳಿಂದ ಅಲಂಕಾರ ಮಾಡಿದ್ದು, ಒಂದುವರೆ ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡುವುದರ ಜೊತೆಗೆ ಸಮಾಧಿಯ ಪಕ್ಕದಲ್ಲಿ ವೇದಿಕೆಯನ್ನು ನಿರ್ಮಿಸಿ ಭಜನೆಯನ್ನು ಮಾಡಲಾಗುತ್ತಿದೆ.

ಹುತಾತ್ಮರಾದ ಯೋಧ ಗುರು ಅವರ ತಿಥಿ ಕಾರ್ಯದಂದೆ, ಭಾರತೀಯ ಸೇನೆ ಮಹತ್ತರದ ಕೆಲಸ ಮಾಡಿದೆ. ಉಗ್ರರ ನೆಲೆಯನ್ನು ದ್ವಂಸಗೊಳಿಸುವುದರ ಮೂಲಕ ಸುಮಾರು 200-300 ಉಗ್ರರು ಮಟಾಷ್ ಆಗಿದ್ದಾರೆಂದು ತಿಳಿದು ಬಂದಿದೆ.