ಹಾಸನ(ಜು:18): ಬಹು ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದ ಹಾಸನ ಮೂಲದ ದೇವರಾಜ್ (25) ಎಂಬ ಯೋಧರೊಬ್ಬರು ಜಮ್ಮುವಿನಲ್ಲಿ ಸಾವಿಗೀಡಾಗಿರುವ ಘಟನೆ ನಡೆದಿದೆ. ಬಹು ಅಂಗಾಂಗಗಳ ವೈಫಲ್ಯದಿಂದ ಸಾವಿಗೀಡಾಗಿರುವ ಹಾಸನ ಮೂಲದ ದುದ್ದ ಗ್ರಾಮದವರಾಗಿದ್ದು ಕಳೆದ ಎರಡು ವರ್ಷಗಳಿಂದ ಜಮ್ಮುವಿನ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಕಳೆದ ಎರಡು ತಿಂಗಳಿನಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ದೇವರಾಜ್ ಪುಣೆಯ ಆರ್ಮಿ ಕ್ಯಾಂಪ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದ ಹಿನ್ನಲೆಯಲ್ಲಿ ನಿನ್ನೆ ಮೃತಪಟ್ಟಿದ್ದಾರೆ. ಇಂದು ದೇವರಾಜ್ ಮೃತದೇಹವನ್ನು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಹಸ್ತಅಂತರಿಸಲಾಯಿತು. ನಂತರ ಆಬ್ಯುಲೆನ್ಸ್ ನಲ್ಲಿ‌ ಸ್ವಗ್ರಾಮ ದುದ್ದ ಗೆ ಕೊಂಡೊಯ್ಯಲಾಯಿತು.

ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಿದ ಬಳಿಕ ಮೃತ ಯೋಧರ ಸಂಪ್ರದಾಯದಂತೆ ಅಂತ್ಯಕ್ರಿಯೆಗೆ ಮಾಡಲಾಯಿತು. ಇನ್ನು ಈ ಅಂತಿಮ‌ಕ್ರಿಯೆಯಲ್ಲಿ ಹಾಸನ ಜಿಲ್ಲಾ ತಹಸಿಲ್ದಾರ್ ಮತ್ತು ದುದ್ದ ಹೊಬಳಿ ಇನ್ಸ್ ಪೆಕ್ಟರ್ ಹರೀಶ್ ಮತ್ತು ಇನ್ನಿತರ ಸರಕಾರಿ ಅಧಿಕಾರಿಗಳು ಭಾಗವಹಿಸಿ ಮೃತ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.ಯೋಧ  ದೇವರಾಜ್ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದು ದೇವರಾಜ್ ಕುಟುಂಬದಲ್ಲಿ ಶೋಕನ ವಾತಾವರಣ ತುಂಬಿಕೊಂಡಿದೆ.