ದುಬೈ(ಮಾ:11): ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ,ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ 3 ನೇ ಸ್ಥಾನಕ್ಕೇರಿದ್ದಾರೆ. ಭಾನುವಾರ ನೂತನವಾಗಿ ಬಿಡುಗಡೆಯಾದ ಮಹಿಳಾ ಟಿ 20 ಬ್ಯಾಟರ್ಸ್ ಪಟ್ಟಿಯಲ್ಲಿ ಸ್ಮೃತಿ 3 ಸ್ಥಾನ ಮೇಲಕ್ಕೇರಿ 3 ನೇ ರ‍್ಯಾಂಕಿಂಗ್ ಪಡೆದಿದ್ದರೆ.

ಏಕದಿನ ಬ್ಯಾಟರ್ಸ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ,ಸ್ಮೃತಿ ನಂ 1 ಸ್ಥಾನದಲ್ಲಿದ್ದಾರೆ. ನಾಯಕಿ ಹರ್ಮನ್ ಪ್ರೀತ್ ಕೌರ್ ಗೈರು ಹಾಜರಿಯಲ್ಲಿ ತಂಡವನ್ನು ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ 20 ಸರಣಿಯಲ್ಲಿ ಸ್ಮೃತಿ ಮುನ್ನಡೆಸಿದ್ದರು.