ಬೆಂಗಳೂರು(ಮಾ:15): ನಗರದಲ್ಲಿ ಸ್ಮಾರ್ಟ್ ಪಾರ್ಕಿಂಗ್ ನಿರ್ಮಿಸಲು ಅನುಮತಿ ದೊರೆತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 2019-20 ರ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು,ಆಯ್ದ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಅನುಮೋದನೆ ನೀಡಿದೆ.

ಈ ಯೋಜನೆಯ ಪ್ರಕಾರ ಪಾರ್ಕಿಂಗ್ ಶುಲ್ಕ ವಸೂಲಿ ಹಾಗೂ ಟಿಕೆಟ್ ನೀಡುವುದಕ್ಕೆ ಪಾರ್ಕಿಂಗ್ ಮೀಟರ್ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಯಾವುದೇ ವಾಹನ ನಿಲುಗಡೆ ಸ್ಥಳ ಪ್ರವೇಶಿಸಿದಾಗ ಪಾರ್ಕಿಂಗ್ ಮೀಟರ್ ಮೂಲಕ ಟಿಕೆಟ್ ಪಡೆದುಕೊಳ್ಳಬೇಕು,ನಂತರ ಅಲ್ಲಿಂದ ಹೊರಡುವಾಗ ಪಾರ್ಕಿಂಗ್ ಮೀಟರ್ ನಲ್ಲಿ ಟಿಕೆಟ್ ನಲ್ಲಿರುವ ಬಾರ್ ಕೋಡ್ ಸ್ಕ್ಯಾನ್ ಮಾಡಿದರೆ ಎಷ್ಟು ಶುಲ್ಕ ಎಂಬುದನ್ನು ಅದು ತಿಳಿಸುತ್ತದೆ.

ವಾಹನ ನಿಲುಗಡೆ ಶುಲ್ಕವನ್ನು ನಗದಿನ ಮೂಲಕ ಪಾವತಿಸುವ ಬದಲಾಗಿ, ಪಾರ್ಕಿಂಗ್ ಮೀಟರ್ ನಲ್ಲಿ ಕ್ರೆಡಿಟ್,ಡೆಬಿಟ್,ಹಾಗೂ ಸ್ಮಾರ್ಟ್ ಕಾರ್ಡ್ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಯೋಜನೆಯ ಅನುಷ್ಠಾನ ಹಾಗೂ ನಿರ್ವಹಣೆಯನ್ನು ಬಿಲ್ಡಿಂಗ್ ಕಂಟ್ರೋಲ್ ಸಲೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ವಹಿಸಲಾಗಿದ್ದು,ಈ ಸಂಸ್ಥೆಯು 10 ವರ್ಷಗಳ ಕಾಲ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ವಹಣೆ ಮಾಡಲಿದೆ.