ಕೊಪ್ಪಳ(ಏ. 04): ಬಿಜೆಪಿಯವರ ಮೂಲ ಆರ್‍ಎಸ್‍ಎಸ್ ಆಗಿದ್ದು, ಗಾಂಧೀಜಿ ಕೊಂದ ಗೋಡ್ಸೆ ವಂಶಸ್ಥರು ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈತ್ರಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹಿಂದುಳಿದ ವರ್ಗದ ಯಾರಿಗಾದರೂ ಬಿಜೆಪಿಯವರು ಸೀಟು ಕೊಟ್ಟಿದ್ದಾರಾ ಬಿಜೆಪಿಯಲ್ಲಿ ಎಲ್ಲಿದೆ ಸಾಮಾಜಿಕ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕೊಲೆಗಡುಕ ಎನ್ನುವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಗಾಂಧಿಯನ್ನು ಕೊಂದವರ ಬಾಯಲ್ಲಿ ಈ ರೀತಿ ಮಾತುಗಳು ಬರುತ್ತವೆ. ಆತ ಒಬ್ಬ ಪೆದ್ದ, ಮೆದುಳಿಗೂ ನಾಲಿಗೆ ಸಂಪರ್ಕವಿಲ್ಲದೇ ಮಾತನಾಡುತ್ತಾರೆ ಎಂದು ವ್ಯಂಗ್ಯ ವಾಡಿದ್ದಾರೆ.

ಬಿಜೆಪಿ ಪಕ್ಷ ಚುನಾವಣೆಯಲ್ಲಿ ಒಬ್ಬ ಹಿಂದುಳಿದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರಾ. ಈಶ್ವರಪ್ಪ ಹಿಂದುಳಿದ ನಾಯಕರಲ್ವಾ ಕುರುಬ ಸಮಾಜದ ನಾಯಕರಲ್ಲವಾ ಅವರು ಹಿಂದುಳಿದವರಿಗೆ ಟಿಕೆಟ್ ಕೊಡಿಸಲು ಅವರಿಂದ ಆಗಿದೆಯಾ ಈಶ್ವರಪ್ಪ ಅವರಿಗೆ ಸ್ವಾಭಿಮಾನವಿದ್ದರೆ ಪಕ್ಷ ಬಿಟ್ಟು ಹೊರಬರಬೇಕು ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಬಿಜೆಪಿಗೆ ತಪ್ಪು ಕಲ್ಪನೆಗಳಿವೆ. ಎಲ್ಲ ಸಮುದಾಯಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಾಂಗ್ರೆಸ್‍ನ ನೀತಿ. ಮತ ಬ್ಯಾಂಕ್ ರಾಜಕಾರಣ ಮಾಡುವವರು ಬಿಜೆಪಿಯವರು ಎಂದರು