ಬೆಂಗಳೂರು(ಜ.19): ಸಿದ್ದರಾಮಯ್ಯ ಕೂಡ ಆಪರೇಷನ್ ಸಂಸ್ಕೃತಿ ಮೂಲಕವೇ ಕಾಂಗ್ರೆಸ್‍ಗೆ ಬಂದಿದ್ದು ಎಂಬುದನ್ನು ಮರೆತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.

ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಆಪರೇಷನ್ ಕಮಲ ಅಂತಾ ಬಿಜೆಪಿ ವಿರುದ್ಧ ಆರೋಪ ಮಾಡಲಾಗುತ್ತಿದೆ. ರಾಜ್ಯದಲ್ಲಿ ಆಪರೇಷನ್ ಸಂಸ್ಕೃತಿ ಆರಂಭವಾಗಿದ್ದೇ ಸಿದ್ದರಾಮಯ್ಯ ಅವರಿಂದ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್’ನಲ್ಲಿ ಅಸಮಾಧಾನ ಹೊಗೆ ಆಡುತ್ತಿದೆ. ಆದ್ದರಿಂದಲೆ ಇಂದು ಶಾಸಕಾಂಗ ಸಭೆಗೆ ಶಾಸಕರು ಲೇಟಾಗಿ ಬಂದಿದ್ದಾರೆ. 3 ಗಂಟೆಗೆ ಆರಂಭ ಆಗಬೇಕಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಸಂಜೆ 5 ಗಂಟೆಗೆ ಆರಂಭವಾಯಿತು. ಹೀಗಾಗಿ ಬಿಜೆಪಿ ಬಗ್ಗೆ ಟೀಕೆ ಮಾಡುವುದಕ್ಕಿಂತ ಕಾಂಗ್ರೆಸ್ ತಮ್ಮ ಕೆಲಸ ಮಾಡಲಿ. ಇದು ಹೀಗೆ ಮುಂದುವರೆದರೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಹೇಳಿದ್ದಾರೆ