ಮೈಸೂರು(ಜ:೦೧): ನಾವು ರೈತರಿಗೆ ಅಲ್ಪ ಮಟ್ಟಿಗಾದರೂ ನೆರವಾದೆವು ಆದರೆ ಮೋದಿ ಏನು ಮಾಡಿದ್ದಾರೆ ಎಂದು ನರೇಂದ್ರ ಮೋದಿ ಅವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮದು ಇರಲಿ ಅವರು ರೈತರಿಗೆ ಹೇಗೆ ನೆರವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ .

ಮೋದಿಯವರು ಕೃಷಿ ಮತ್ತು ರೈತ ವಿರೋಧಿಯಾಗಿದ್ದಾರೆ , ನಾನು ನಿಯೋಗದೊಂದಿಗೆ ಹೋದಾಗಲೂ ಸಹ ಮೋದಿ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ, ನಾವು ಏನು ಮಾಡಿದ್ದೇವೆ ಎಂದು ಕೇಳುವುದರ ಬದಲು ಸಾಲ ಮನ್ನಾ ಮಾಡಲಿ ಎಂದು ಗುಡುಗಿದ್ದಾರೆ.