ಮೈಸೂರು(ಜುಲೈ.04) ಹೆಚ್.ವಿಶ್ವನಾಥ್ ಅವರ ರಾಜ್ಯಾಧ್ಯಕ್ಷ ಸ್ಥಾನದ ರಾಜೀನಾಮೆಯ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, ಸರಿಯಾಗಿ 6 ತಿಂಗಳಿಗೆ ಅಧ್ಯಕ್ಷಗಿರಿ ಮಾಡಲಿಕ್ಕೆ ಆಗಲಿಲ್ಲ. ಇನ್ನು ಬೇರೆಯವ ಬಗ್ಗೆ ಏನು ಮಾತಾಡ್ತಾನೆ. ಜೆಡಿಎಸ್‌ ಶಾಸಕ ಎಚ್‌.ವಿಶ್ವನಾಥ್‌ ಅವರಿಗೆ ಲೇವಡಿ ಮಾಡಿದ್ದಾರೆ.

ಮೈತ್ರಿ ಮುನ್ನೆಡುಸುವಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ವಿಫ‌ಲರಾಗಿದ್ದಾರೆ ಎನ್ನುವ ವಿಶ್ವನಾಥ್‌ ಆರೋಪಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ,ಅವನು ಅಧ್ಯಕ್ಷಗಿರಿಯನ್ನೇ ಮಾಡಲಿಕ್ಕೆ ಆಗದೆ ರಾಜೀನಾಮೆ ಕೊಟ್ಟಿದ್ದಾನೆ, ಅಧ್ಯಕ್ಷನಾಗಿ ಎಷ್ಟು ದಿನ ಆಯ್ತು ಅವನು ಇನ್ನು ಬೇರೆಯವರ ಬಗ್ಗೆ ಆರೋಪ ಮಾಡುತ್ತಾನೆ ಎಂದು ಏಕವಚನದಲ್ಲೇ ಕಿಡಿಕಾರಿದರು.

ನಾನು ಮೋದಿ, ಶಾ ಜೊತೆ ಮಾತನಾಡಿಲ್ಲ ನನಗೆ ಬಂದಿರುವ ಮಾಹಿತಿ ಪ್ರಕಾರ ನರೇಂದ್ರ ಮೋದಿ , ಅಮಿತ್‌ ಶಾ ಅವರು ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ನಡೆಸುತ್ತಿದ್ದಾರೆ. ನಮ್ಮ ಶಾಸಕರನ್ನ ಸೆಳೆಯಲು ಪಿತೂರಿ ಮಾಡುತ್ತಿದ್ದಾರೆ. ನಾನೇನು ಅವರ ಬಳಿ ಮಾತನಾಡಿಲ್ಲ ಎಂದು ಹೇಳಿದರು.