ಬಾಗಲಕೋಟೆ(ಆ:30): ಸಮ್ಮಿಶ್ರ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಅವರೇ ನೇರ ಕಾರಣ ಎಂಬ ವದಂತಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಿದ್ದರಾಮಯ್ಯ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ.

ಈ ಕುರಿತು ಮುಧೋಳಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯನವರಿಗೆ ಸಿದ್ದರಾಮಯ್ಯನವರೇ ಸಾಟಿ, ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದು ಕಾರಣ ಅಂತ ದೇವೇಗೌಡರು, ಕುಮಾರಸ್ವಾಮಿ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿದ ನಿರಂಜನಾನಂದಪುರಿ ಸ್ವಾಮೀಜಿ, ದೇವೇಗೌಡರ ಕುಟುಂಬ ಮತ್ತೊಮ್ಮೆ ಹುಟ್ಟಿ ಬಂದ್ರೂ ಸಿದ್ದರಾಮಯ್ಯ ಹೆಸರು ಹಾಳು ಮಾಡಲು ಆಗಲ್ಲ ಎಂದು ಕಿಡಿಕಾರಿದರು.

ದೇವೇಗೌಡರು ಮಾಜಿ ಪ್ರಧಾನಿ. ಆ ಬಗ್ಗೆ ಗೌರವ ಇದೆ. ಆದರೆ, ಅವರಿಗೆ ಈಗ 80 ವಯಸ್ಸು. ಹೀಗಾಗಿ ಮಕ್ಕಳಂತೆ ಆಡ್ತಿದ್ದಾರೆ. ಮಕ್ಕಳು ಹೇಗೆ ಮಾತಾಡ್ತಾರೆ ಅಂತ ಗೊತ್ತಲ್ಲ. ಅವರ ಬುದ್ದಿ ಹಾಗೆ ಎಂದು ದೇವೇಗೌಡರನ್ನು ನನಿರಂಜನಾನಂದಪುರಿ ಸ್ವಾಮೀಜಿ ವ್ಯಂಗ್ಯ ಮಾಡಿದರು .