ಚೆನ್ನೈ(ಮಾ,16): ನಾನು ಹುಡುಗ ಆಗಿ ಹುಟ್ಟಿದ್ದರೆ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾನನ್ನು ಮದುವೆಯಾಗುತ್ತಿದ್ದೆ ಎಂದು ಬಹುಬಾಷಾ ನಟಿ ಶ್ರುತಿ ಹಾಸನ್ ಹೇಳಿದ್ದಾರೆ.

ಶ್ರುತಿ ಹಾಸನ್ ಫೀಲ್ಮ್ ಫೇರ್ ಮ್ಯಾಗಜೀನ್‍ಗೆ ಸಂದರ್ಶನ ನೀಡುವ ವೇಳೆ ಸಂದರ್ಶಕಿ ನೀವು ಹುಡುಗ ಆಗಿ ಹುಟಿದ್ದರೆ, ಯಾರನ್ನು ಡೇಟ್ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಆಗ ಶ್ರುತಿ ಹಾಸನ್ ನಾನು ಹುಡುಗ ಆಗಿದ್ದರೆ ತಮನ್ನಾಳನ್ನು ಮದುವೆ ಆಗುತ್ತಿದ್ದೆ ಎಂದು ಉತ್ತರಿಸಿದ್ದಾರೆ.

ಆಕೆ ಒಳ್ಳೆಯ ಹುಡುಗಿ ನಾನು ಹುಡುಗ ಆಗಿದಿದ್ರೆ ತಮನ್ನಾಳನ್ನು ಡೇಟ್ ಮಾಡಿ ಮದುವೆ ಆಗುತ್ತಿದೆ ಎಂದು ಶ್ರುತಿ ಹೇಳಿದ್ದಾರೆ.

ಇನ್ನು ಇತ್ತೀಚಿಗೆ ಶ್ರುತಿ ಹಾಸನ್ ಪವನ್ ಕಲ್ಯಾಣ್ ಜೊತೆ ಗಬ್ಬರ್ ಸಿಂಗ್, ರಾಮ್ ಚರಣ್ ಜೊತೆ ಎವಡು ಹಾಗೂ ಅಲ್ಲು ಅರ್ಜುನ್ ಜೊತೆ ರೇಸ್ ಗುರಂ ಚಿತ್ರಗಳಲ್ಲಿ ನಟಿಸಿದ್ದರು.