ನವದೆಹಲಿ(ಮಾ:16): ಸ್ಪಾಟ್ ಫಿಕ್ಸಿಂಗ್ ನಲ್ಲಿ ಸಿಕ್ಕಿಬಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಶ್ರೀಶಾಂತ್ ಮೇಲೆ ಹೇರಿದ ಅಜೀವ ನಿಷೇಧವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ.ಇದರೊಂದಿಗೆ 6 ವರ್ಷಗಳ ಶ್ರೀಶಾಂತ್ ವನವಾಸ ಕೊನೆಗೂ ಅಂತ್ಯಗೊಂಡಂತಾಗಿದೆ.

ಶುಕ್ರವಾರ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ಕೆ.ಎಂ ಜೋಸೆಫ್ ಒಳಗೊಂಡ ದ್ವಿಸದಸ್ಯ ಪೀಠ ಕೈಗೆತ್ತಿಕೊಂಡಿತ್ತು,ಬಳಿಕ ಶ್ರೀಶಾಂತ್ ಅಜೀವ ನಿಷೇಧವನ್ನು ರದ್ದು ಮಾಡಿತು. ಅಷ್ಟೇ ಅಲ್ಲದೇ ಬಿಸಿಸಿಐ ಶಿಸ್ತು ಸಮಿತಿ ಮುಂದಿನ ಮೂರು ತಿಂಗಳ ಒಳಗಾಗಿ ಶಿಕ್ಷೆಯನ್ನು ಮರುಪರಿಶೀಲನೆ ನಡೆಸುವಂತೆಯೂ ಸಹ ಸೂಚನೆ ನೀಡಿದೆ.

ಶ್ರೀಶಾಂತ್‌ ಭವಿಷ್ಯದ ದೃಷ್ಟಿಯಿಂದ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಕೇರಳ ಕ್ರಿಕೆಟ್‌ ಸಂಸ್ಥೆ (ಕೆಸಿಎ) ಹಿರಿಯ ಅಧಿಕಾರಿ ಟಿ.ಸಿ. ಮ್ಯಾಥ್ಯೂ ಸ್ವಾಗತಿಸಿದ್ದಾರೆ.