ಮುಂಬೈ(ಸೆ:04): ಸಹೋ ಚಿತ್ರದ ನಾಯಕಿ ಶ್ರದ್ಧಾ ಕಪೂರ್ ತಮ್ಮ ಎಜುಕೇಷನ್ ವಿಚಾರವಾಗಿ ಮಾತನಾಡಿದ್ದಾರೆ. ಸಾಹೋ ಚಿತ್ರದ ನಾಯಕಿ ಶ್ರದ್ಧಾ ಕಪೂರ್ ಎಷ್ಟು ಓದಿರಬಹುದು ಎಂಬ ಸಹಜ ಕುತೂಹಲ ಅವರ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ . ಈ ನಡುವೆ ಈ ಕುರಿತು ಮಾತನಾಡಿರುವ ಶ್ರದ್ಧಾ ಕಪೂರ್ ತಾನು ಸಿನಿಮಾಗಳಲ್ಲಿ ಅಭಿನಯಿಸುವುದಕ್ಕಾಗಿ ಶಿಕ್ಷಣವನ್ನು ಅರ್ಧಕ್ಕೆ ಬಿಡಬೇಕಾಗಿ ಬಂದಿತು ಎಂದು ಹೇಳಿಕೊಂಡಿದ್ದಾರೆ.

ಸಾಹೋ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ನಟಿ ಶ್ರದ್ಧಾ ಕಪೂರ್ ಭಾಗಿಯಾಗಿದ್ದರು. ಇವರ ಶಿಕ್ಷಣದ ಕುರಿತು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ ಆರಂಭದಲ್ಲಿ ಶಿಕ್ಷಣ ಮುಗಿಸಿ ನಟನೆ ಆರಂಭಿಸಬೇಕು ಎಂದು ಭಾವಿಸಿದ್ದೆ. ಆದರೆ ಅಚಾನಾಕ್ ಆಗಿ ನಾನು ಸಿನಿಮಾಗಳಿಗೆ ಪಾದಾರ್ಪಣೆ ಮಾಡಬೇಕಾಗಿ ಬಂತು ಎಂದು ಹೇಳಿಕೊಂಡಿದ್ದಾರೆ.

ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಒಮ್ಮೆ ಭಾರತಕ್ಕೆ ಬಂದೆ. ತುಂಬಾ ಆಫರ್ಸ್ ಬಂದವು ಆದ್ರೆ ಈ ಆಫರ್ ಗಳು ಸಿನಿಮಾದಲ್ಲಿ ನಟಿಸಲಿಕ್ಕೆ ಅಂದ್ಕೊಬೇಡಿ, ಕೇವಲ ಆಡಿಷನ್ ನೀಡಲು ಎಂದು ಹೇಳಿದರು. ಆ ಪರಿಸ್ಥಿತಿಯಲ್ಲಿ ತಾನು ಬೇಗ ಯಾವುದಾದರು ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕಿತ್ತು. ಹಾಗಾಗಿ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ನಟಿಯಾದೆ ಎಂದು ತಿಳಿಸಿದರು.