ವಿಶ್ವ ಕ್ರಿಕೆಟ್ ನಲ್ಲಿ ವೇಗದ ಬೌಲಿಂಗ್ ಮೂಲಕ ಹೆಸರಾಗಿರುವ ರಾವಲ್ಪೆಂಡಿ ಎಕ್ಸ್ ಪ್ರೆಸ್ ಶೋಯೆಬ್ ಅಕ್ತರ್ ಮತ್ತೆ ಕ್ರಿಕೆಟ್ ಗೆ ರೀ ಎಂಟ್ರಿ ಕೊಡುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯ ವಿಡಿಯೋವೊಂದರಲ್ಲಿ ಮಾತನಾಡಿ ಪೋಸ್ಟ್ ಮಾಡಿರುವ ಅಕ್ತರ್ ಇಂದಿನ ಯುವ ಆಟಗಾರರು ಕ್ರಿಕೆಟ್ ಬಗ್ಗೆ ತುಂಬಾ ತಿಳಿದುಕೊಂಡಿದ್ದೇವೆ ಎಂದುಕೊಂಡಿದ್ದಾರೆ,ನನ್ನ ವೇಗದ ಬೌಲಿಂಗ್ ಗೆ ಅವರು ಸವಾಲು ಮಾಡಬಹುದು,ನಾನು ಮತ್ತೆ ಮೈದಾನಕ್ಕೆ ಇಳಿಯುತ್ತಿದ್ದೇನೆ ಅಸಲಿ ವೇಗ ಏನೆಂಬುದನ್ನು ನಾನು ತೋರಿಸುತ್ತೇನೆ ಎಂದು ಹೇಳಿದ್ದಾರೆ.

ಫೆ 14 ರಂದು ಪಾಕಿಸ್ತಾನ್ ಪ್ರೀಮಿಯರ್ ಲೀಗ್ ಆರಂಭವಾಗುತ್ತಿದ್ದು,ಅಕ್ತರ್ ಫೆ 14 ರಂದು ಕಂಬ್ಯಾಕ್ ಮಾಡುವುದಾಗಿ ಹೇಳಿದ್ದಾರೆ,ಹೀಗಾಗಿ ಪಿ ಪಿ ಎಲ್ ನ ಯಾವ ಟೀಮ್ ನಲ್ಲಿ ಅಕ್ತರ್ ಪ್ರತಿನಿಧಿಸಲಿದ್ದಾರೆ ಎಂದು ಕಾದುನೋಡಬೇಕಿದೆ.