ತುಮಕೂರು:(ಜ22): ಕಣ್ಣಿಗೆ ಕಾಣುವ ದೇವರು ನಿನ್ನೆ ಮರೆಯಾಗಿ ಹೋಗಿದ್ದಾರೆ. “ಸೇವೆಯೇ ಕಾಯಕ, ಮಠವೇ ಕರ್ಮ ಭೂಮಿ” ಎಂಬ ಮಾನವೀಯ ನೆಲೆಯೊಂದಿಗೆ ಹಗಲಿರುಳೂ ಶ್ರಮಿಸಿ ಬಡ ಮಕ್ಕಳ ಬದುಕನ್ನು ಚಿನ್ನವಾಗಿಸಿದ್ದಾರೆ.

ಈ ದೇವರ ನಿತ್ಯ ಕರ್ಮಗಳು ಹೇಗಿತ್ತೆಂದರೆ, ಶ್ರಿಗಳು ಪ್ರತಿದಿನ ರಾತ್ರಿ 11 ಕ್ಕೆ ಮಲಗಿದರೆ, ಮುಂಜಾನೆ 3 ಕ್ಕೆಯೇ ಎದ್ದು ಬಿಡ್ತಾಯಿದ್ರಂತೆ, ಅಂದ್ರೆ ಕೇವಲ 04 ಗಂಟೆ ಮಾತ್ರ ನಿದ್ದೆ ಮಾಡ್ತಾಯಿದ್ರು. ಇನ್ನು ಎದ್ದ ಮೇಲೆ ಓದು, ಸ್ನಾನ, ಪೂಜೆ, ಧ್ಯಾನ, ಭಜನೆಯ ನಂತ್ರ ಮುಂಂಜಾನೆ ಪ್ರಸಾದ ಸೇವಿಸುತ್ತಿದ್ದರು.

ಶ್ರೀಗಳು ಇಡ್ಲಿ, ದಾಲು, ಹಾಲು, ಮತ್ತು ಹಣ್ಣು, ಮಧ್ಯಾಹ್ನ ರಾಗಿ ಮುದ್ದೆ, ಸ್ವಲ್ಪ ಅನ್ನದ ಮಿತಾಹಾರ ಸೇವಿಸುತ್ತಿದ್ದರು. ಇವರಿಗೆ ಕಾಫಿ, ಟೀ, ಅಭ್ಯಾಸವಿಲ್ಲ ಬಾಯಾರಿಕೆಯಾದರೆ ಮಜ್ಜಿಗೆ ಬೇವಿನ ಕಷಾಯ ಸೇವಿಸುತ್ತಿದ್ದರಂತೆ.

ಒಟ್ಟಿನಲ್ಲಿ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಅಪಾರ ಭಕ್ತವೃಂದವನ್ನು ಹೊಂದಿದ ಶ್ರೀಗಳು ನಿನ್ನೆ ಲಿಂಗೈಕ್ಯರಾಗಿದ್ದು, ಭರಿಸಲಾರದ ದುಃಖ ತಂದಿದೆ.