ಲಂಡನ್:(ಜ22): ಇಡೀ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ನಡೆದಾಡುವ ದೇವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ಲಂಡನ್‍ನಲ್ಲಿ ಕಂಬನಿ ಮಿಡಿದಿದ್ದಾರೆ.

ಶಿಕ್ಷಣ ಸಮಾಜ ಉದ್ದಾರಕ್ಕಾಗಿ ಅವರು ಪಟ್ಟ ಶ್ರಮ ನಿಜಕ್ಕೂ ಅದ್ಭುತ. ಶ್ರೀಗಳು ಭಾರತದ ಇತಿಹಾಸದಲ್ಲಿ ಎಂದಿಗೂ ಅಮರ ಎಂದು ಬ್ರಿಟಿಷ್ ಕನ್ನಡಿಗರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಂದು ಸಮಾಜಕ್ಕೆ ಮಾತ್ರ ಶ್ರೀಗಳು ಕೊಡುಗೆ ನೀಡದೆ, ಜಾತಿ, ಧರ್ಮ, ಭೇದ ಮಾಡದೆ ಇಡೀ ಮನುಕುಲಕ್ಕೆ ಕೊಡುಗೆ ನೀಡಿದ್ದಾರೆ.

ಭಾರತಕ್ಕೆ ಮಾತ್ರ ನಡೆದಾಡುವ ದೇವರಾಗಿರದೇ, ಇಡೀ ಮನುಕುಲಕ್ಕೆ ದೇವರಾದ ಶ್ರೀಗಳ ಲಿಂಗೈಕ್ಯರಾಗಿರುವ ಸುದ್ದಿ ಕೇಳಿ ಲಂಡನ್‍ನಲ್ಲಿರೋ ಸ್ವಾಮೀಜಿ ಭಕ್ತರು ಕಂಬನಿ ಮಿಡಿದಿದ್ದಾರೆ.