ನವದೆಹಲಿ(ಜ,22): ರಾಷ್ಯದ ಕಿರ್ಚ್ ಜಲಸಂಧಿಯಲ್ಲಿ ತೈಲ ಸಾಗಾಣಿಕೆ ಮಾಡುತ್ತಿದ್ದ ಎರಡು ಹಡಗುಗಳಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 11 ಜನರು ದುರ್ಮರಣ ಹೊಂದಿದ್ದಾರೆ ಎನ್ನಲಾಗಿದೆ.

ಒಂದು ಹಡಗಿನಲ್ಲಿ ದ್ರವೀಕೃತ ನೈಸರ್ಗಿಕ ಅನಿಲ ಮತ್ತೊಂದು ಹಡಗು ಟ್ಯಾಂಕರ್ ಆಗಿತ್ತು. ಎರಡು ಹಡಗುಗಳು ಒಂದರಿಂದ ಮತ್ತೊಂದಕ್ಕೆ ಇಂಧನವನ್ನು ವರ್ಗಾವಣೆ ಮಾಡುತ್ತಿರುವ ಸಂದರ್ಭದಲ್ಲಿ ಬೆಂಕಿ ಹತ್ತಿಕೊಂಡಿದೆ.

ಒಂದು ಹಡಗಿನಲ್ಲಿ ಒಂಬತ್ತು ಟರ್ಕಿಷ್ ನಾಗರಿಕರು ಮತ್ತು ಎಂಟು ಭಾರತೀಯರು ಸೇರಿದಂತೆ 17 ಸಿಬ್ಬಂದಿಗಳು ಇದ್ದರು. ಇನ್ನೊಂದು ಹಡಗಿನಲ್ಲಿ ಏಳು ಮಂದಿ ಟರ್ಕಿಷ್ ಪ್ರಜೆಗಳು, ಏಳು ಮಂದಿ ಭಾರತೀಯ ನಾಗರಿಕರು ಮತ್ತು ಲಿಬಿಯಾದಿಂದ ಬಂದಿದ್ದ 15 ಸಿಬ್ಬಂದಿಗಳನ್ನು ಹೊಂದಿತ್ತು ಎಂದು ರಷ್ಯಾದ ಸುದ್ದಿ ಸಂಸ್ಥೆ ಟಾಸ್ ಹೇಳಿದೆ

ಕನಿಷ್ಠ 11 ನಾವಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಮ್ಯಾರಿಟೈಮ್ ಏಜೆನ್ಸಿ ಆರ್ಟಿ ನ್ಯೂಸ್, ರಷ್ಯಾದ ಟೆಲಿವಿಷನ್ ನೆಟ್ವರ್ಕ್ ಹೇಳಿದೆ.

ಒಂದು ಹಡಗಿನಲ್ಲಿ ಸ್ಫೋಟ ಸಂಭವಿಸಿದೆ, ನಂತರ ಬೆಂಕಿ ಮತ್ತೊಂದು ಹಡಗಿಗೆ ಹರಡಿತು ಎಂದು ರಷ್ಯಾದ ಮ್ಯಾರಿಟೈಮ್ ಏಜೆನ್ಸಿಯ ವಕ್ತಾರರು ಹೇಳಿದ್ದಾರೆ. ಕೆಲವು ಕೆಲವು ನಾವಿಕರು ಹಡಗಿನಿಂದ ಹಾರುವ ಮೂಲಕ ಬೆಂಕಿಯಿಂದ ತಪ್ಪಿಸಿಕೊಂಡಿದ್ದಾರೆ.