ಶಿವಮೊಗ್ಗ:(ಫೆ04): ಅಂತೂ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಶತಾಬ್ದಿ ರೈಲಿಗೆ ಚಾಲನೆ ದೊರೆತಿದೆ.

ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ.ಎಸ್ ಯಡಿಯೂರಪ್ಪ ಶತಾಬ್ದಿ ರೈಲು ಚಾಲನೆಗೆ ಹಸಿರು ನಿಶಾನೆ ತೋರಿಸಿದ್ದಾರೆ.

ಈ ರೈಲು ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ಸಂಚರಿಸಲಿದೆ. ಶಿವಮೊಗ್ಗ, ಭದ್ರಾವತಿ, ಕಡೂರು, ತುಮಕೂರಿನಲ್ಲಿ ಸ್ಟಾಪ್ ಕೊಡಲಿದೆ.

ರೈಲಿನ ದರ ಸಾಮಾನ್ಯ ಬೋಗಿಯಲ್ಲಿ ಹಿರಿಯ ಪುರುಷರಿಗೆ 100 ಹಾಗೂ ಮಹಿಳೆಯರಿಗೆ 90 ರೂ
ವಯಸ್ಕರರಿಗೆ- 145 ರೂ
ಮಕ್ಕಳಿಗೆ- 75 ರೂ
ಎಸಿ ಕೋಚ್‍ಗೆ ದರ- ಹಿರಿಯ ಪುರುಷರಿಗೆ-330 ರೂ
ಹಿರಿಯ ಮಹಿಳೆಯರಿಗೆ-290 ರೂ
ವಯಸ್ಕರರಿಗೆ-485ರೂ
ಮಕ್ಕಳಿಗೆ-245 ರೂ
ಒಟ್ಟು 12 ಬೋಗಿಗಳಿದ್ದು, ಬ್ರೇಕ್ ಲಗೇಜ್ ಹಾಗೂ ಜನರೇಟರ್ ಸೇರಿದಂತೆ ಎರಡು ಬೋಗಿಗಳಿವೆ. ಎಸಿ ಚೇರ್ ಕಾರ್ ಎರಡು ಬೋಗಿಗಳಿವೆ, ದ್ವಿತೀಯ ದರ್ಜೆ ಚೇರ್ ಕಾರ್ 08 ಬೋಗಿಗಳಿವೆ.

ಶಿವಮೊಗ್ಗದಿಂದ ಬೆಳಗ್ಗೆ 5.15 ಕ್ಕೆ ಹೊರಡುವ ರೈಲು ಬೆಂಗಳೂರಿಗೆ 10.10 ಕ್ಕೆ ತಲುಪಲಿದೆ. ಇನ್ನೂ ಅದೇ ದಿನ ಸಂಜೆ ಬೆಂಗಳೂರಿನಿಂದ 5.15 ಹೊರಡುವ ರೈಲು ರಾತ್ರಿ 10.15 ಕ್ಕೆ ಶಿವಮೊಗ್ಗಕ್ಕೆ ತಲುಪಲಿದೆ. ಈ ರೈಲು ಸಂಚಾರದ ಆರಂಭ ಶಿವಮೊಗ್ಗ ಸಂಚರಿಸುವ ಪ್ರಯಾಣಿಕರಿಗೆ ಗುಡ್ ನ್ಯೂಸ್ ಅಂತಾನೆ ಹೇಳಬಹುದು.