ಮಂಗಳೂರು(ಸೆ.09) ಮೊನ್ನೆಯಷ್ಟೇ ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದ ಡಿಸಿ ಶಶಿಕಾಂತ್ ಅವರ ವಿರುದ್ಧ ಅಕ್ರಮ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಹುದ್ದೆ ಮಾಡುತ್ತಿದ್ದ ಶಶಿಕಾಂತ್ ಅವರು ಜಿಲ್ಲೆಯ ಮರಳುಗಾರಿಕೆ ಟೆಂಡರ್ ನಲ್ಲಿ ಅಕ್ರಮ ಎಸಗಿದ್ದಾರೆ ಎಂದು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟ ಮತ್ತು ಮರಳು ಜಂಟಿ ಕ್ರಿಯಾ ಸಮಿತಿ ಶಶಿಕಾಂತ್ ಅವರ ಮೇಲೆ ಆರೋಪ ಮಾಡಿದೆ.

ಐ ಸರ್ಜ್ ಪ್ರೈವೇಟ್ ಲಿಮಿಟೆಡ್ ಮತ್ತು ಟಿ4ಯು, ಈ ಎರಡು ಸಂಸ್ಥೆಗಳನ್ನು ಉಡುಪಿ ಜಿಲ್ಲಾಡಳಿತ ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಆದರೆ, ಈ ಎರಡು ಸಂಸ್ಥೆಗಳಿಗೆ, ಮರಳು ಲಾರಿಗಳಿಗೆ ಜಿಪಿಎಸ್ ಅಳವಡಿಸುವ ಬಿಡ್ ಅನ್ನು ನೀಡಲಾಗಿದೆ” ಎಂದು, ಸಸಿಕಾಂತ್ ವಿರುದ್ದ ಆರೋಪಿಸಲಾಗಿದೆ. ಇಷ್ಟೇ ಅಲ್ಲದೇ, ಜಿಲ್ಲೆಯ ಹಳೆಯಂಗಡಿ ಭಾಗದಲ್ಲಿ, ಹೂಳೆತ್ತಲಾಗಿದ್ದ ಹತ್ತು ಸಾವಿರಕ್ಕೂ ಹೆಚ್ಚು ಮೆಟ್ರಿಕ್ ಟನ್ ಮರಳನ್ನು, ಒಂದೇ ದಿನದಲ್ಲಿ ವಿಲೇವಾರಿ ಮಾಡಿ, ಮರಳು ರವಾನಿಸಲು ಸಸಿಕಾಂತ್ ಸೆಂಥಿಲ್ ಅವಕಾಶ ನೀಡಿದ್ದಾರೆ ಎಂದು ಸಂಘದ ಅಧ್ಯಕ್ಷರು ಆರೋಪಿಸಿದ್ದಾರೆ.