ಕರಾಚಿ(ಪಾಕಿಸ್ತಾನ): ನಾವು ಶಾಂತಿ ಪ್ರಿಯರು ನಮ್ಮ ಸೈನ್ಯದ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ ಎಂದು ಪಾಕ್ ಕ್ರೆಕೆಟರ್ ಶಾಹಿದ್ ಅಫ್ರಿದಿ ತಮ್ಮ ದೇಶವನ್ನು ಕೊಂಡಾಡಿದ್ದಾರೆ.

ಭಾರತವೇ ಪಾಕಿಸ್ತಾನವನ್ನ ಕೆಣಕುತ್ತಿದೆ. ನಾವು ಶತ್ರುಗಳನ್ನೂ ಸೌಮ್ಯವಾಗಿ ನಡೆಸಿಕೊಳ್ಳುತ್ತೇವೆ. ನಮ್ಮ ಪ್ರಧಾನಿ ಇಮ್ರಾನ್ ಖಾನ್ ಹೇಳಿದಂತೆ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನದ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ.

ಜಮ್ಮು ಕಾಶ್ಮೀರದ ಪುಲ್ವಾಮಾ ಉಗ್ರರ ದಾಳಿಗೆ ಭಾರತೀಯ ಸೇನೆ ಈಗಾಗಲೇ ಪ್ರತೀಕಾರ ತೀರಿಸಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ ಭಾರತೀಯ ಯುದ್ಧ ವಿಮಾನಗಳು ಅಲ್ಲಿರುವ ಉಗ್ರರ ಅಡಗು ತಾಣಗಳನ್ನು ನಾಶ ಮಾಡಿವೆ. ಈ ಮೂಲಕ ಸರ್ಜಿಕಲ್ ಸ್ಟ್ರೈಕ್ ನಡೆಸುವಲ್ಲಿ ಭಾರತ ಯಶಸ್ವಿಯಾಗಿದೆ. ಇದೀಗ ಪಾಕಿಸ್ತಾನವೂ ಭಾರತದ ಮೇಲೆ ಪ್ರತಿದಾಳಿಗೆ ಸಜ್ಜಾಗಿದೆ. ಈಗಾಗಲೇ ಭಾರತದ ಮೇಲೆ ಬಾಂಬ್ ಹಾಕಿ ಇಲ್ಲಿಂದ ಕಾಲ್ಕಿತ್ತಿದೆ. ಎರಡು ಉಭಯ ದೇಶಗಳ ನಡುವೇ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ.