ಮುಂಬೈ(ಫೆ.04): ಡ್ಯಾನ್ಸರ್ ಹಾಗೂ ನೃತ್ಯ ಸಂಯೋಜಕ ಸಲ್ಮಾನ್ ಯೂಸುಫ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದ್ದು, ಮುಂಬೈನ ಅಂಧೇರಿಯ ಓಶಿವರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಲ್ಮಾನ್ ಮತ್ತು ಆತನ ಸೋದರ ಸಂಬಂಧಿ ನನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಜನವರಿ 30ರಂದು ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಇಬ್ಬರು ಬೇರೆ ಬೇರೆ ಸ್ಥಳಗಳಲ್ಲಿ ನನಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದು, ಸಿನಿಮಾ ಉದ್ಯಮದಲ್ಲಿ ಇದೆಲ್ಲ ಸಾಮಾನ್ಯ ಅಂತಾ ಸಲ್ಮಾನ್ ಹೇಳಿದ್ದರು. ಆಷ್ಟೇ ಅಲ್ಲದೇ ವಿಷಯವನ್ನು ಬಹಿರಂಗಗೊಳಿಸದಂತೆ ಬೆದರಿಕೆಯನ್ನು ಸಲ್ಮಾನ್ ಹಾಕಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಸಲ್ಮಾನ್, ಬಾಲಿವುಡ್‍ನಲ್ಲಿ ಕೆಲ ಚಿತ್ರಗಳಿಗೂ ನೃತ್ಯ ಸಂಯೋಜನೆ ಮಾಡಿದ್ದು, ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ, ಇನ್ನು ಕನ್ನಡದ ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋವೊಂದರ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ.