ಈ ಗಿಡವು ಸಾಮಾನ್ಯವಾಗಿ ಹಳದಿ ಬಣ್ಣದ ಹೂವು ಚಪ್ಪಟೆ ಕಾಯಿ ತುದಿಯಲ್ಲಿ ಇರುತ್ತದೆ. ಅಕ್ಟೋಬರ್ ಡಿಸೆಂಬರ್‍ನಲ್ಲಿ ಹೂವು ಕಾಯಿ ಬಿಡುತ್ತದೆ. ಸೋನಾಮುಖಿ ಯ ಪುಡಿಯನ್ನು ಜೇನಿನಲ್ಲಿ ಬೆರಸುವುದರಿಂದ ಜ್ವರದಿಂದ ನಾಲಿಗೆಯ ಮೇಲಾಗುವ ಹುಣ್ಣು ವಾಸಿಯಾಗುತ್ತದೆ.

ಸೋನಾಮುಖಿ, ಶುಂಠಿ, ಅಳಲೆ ಕಾಯಿ ಪುಡಿ ಮಾಡಿ ನೀರಿಗೆ ಹಾಕಿ ಕಾಯಿಸಿ. ಅದಕ್ಕೆ ಕೆಂಪು ಕಲ್ಲು ಸಕ್ಕರೆ ಬೆರೆಸಿ ಸೇವಿಸುವುದರಿಂದ ಜ್ವರ ಕಡಿಮೆಯಾಗುತ್ತದೆ.

ಚರ್ಮವ್ಯಾಧಿ ಗುಣಮುಖವಾಗಲು ಸೋನಾಮುಖಿಯ ಬೀಜ ಹಾಗೂ ಕೈ ಕಾಯಿ ಗಿಡದ ತಿರುಳನ್ನು ರುಬ್ಬಿ ಮೊಸರಿನಲ್ಲಿ ಬೆರಸಿ ಹಚ್ಚುವುದರಿಂದ ಚರ್ಮವ್ಯಾಧಿ ಗುಣಮುಖವಾಗುತ್ತದೆ. ಸ್ತನದ ಹುಣ್ಣು ಮತ್ತು ಗಡ್ಡೆಗಳಿಗೂ ಔಷಧಿಯಾಗಿ ಕಾರ್ಯ ನಿರ್ವಹಿಸುತ್ತದೆ.