ನವದೆಹಲಿ(ಮಾ:15): ಬಿಜೆಪಿ ಟಿಕೆಟ್ ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮಾಜಿ ಕ್ರಿಕೆಟರ್ ಸೆಹ್ವಾಗ್ ನಿರಾಕರಿಸಿದ್ದಾರೆ. ಇದರಿಂದಾಗಿ ಸೆಹ್ವಾಗ್ ಅವರನ್ನು ಕಣಕ್ಕೆ ಇಳಿಸುವ ಬಿಜೆಪಿ ಪ್ರಯತ್ನ ವ್ಯರ್ಥವಾಗಿದೆ. ಸೆಹ್ವಾಗ್ ಅವರಿಗೆ ದೆಹಲಿಯಿಂದ ಟಿಕೆಟ್ ನೀಡಲು ಪಕ್ಷ ಮುಂದಾಗಿತ್ತು ಆದರೆ ಸ್ಪರ್ಧೆಗೆ ಸೆಹ್ವಾಗ್ ನಿರಾಕರಿಸಿದ್ದಾರೆ.

ಸೆಹ್ವಾಗ್ ಅವರನ್ನು ದೆಹಲಿ ಪಶ್ಚಿಮ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿತ್ತು ಆದರೆ ವೈಯಕ್ತಿಕ ಕಾರಣ ನೀಡಿ ಸೆಹ್ವಾಗ್ ಸ್ಪರ್ಧಿಸಲು ನಿರಾಕರಿಸಿದ್ದಾರೆ. “ನನಗೆ ರಾಜಕೀಯದಲ್ಲಿ ಆಸಕ್ತಿಯೂ ಇಲ್ಲ,ನಾನು ಚುನಾವಣೆಗೆ ಸ್ಪರ್ಧಿಸುವುದೂ ಇಲ್ಲ”ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.