ಬೆಂಗಳೂರು:(ಜ17): ಎ. ಹರ್ಷ ನಿರ್ದೇಶನ ಮಾಡಿರುವ ನಿಖಿಲ್ ಕುಮಾರ್ ನಟಿಸಿರುವ ಸೀತಾರಾಮ ಕಲ್ಯಾಣ ಜನವರಿ 25 ರಂದು ತೆರೆ ಕಾಣುತ್ತಿದೆ.

ಈ ಸಿನಿಮಾವು ಒಟ್ಟು 400 ಥೇಟರ್‍ಗಳಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರಕ್ಕೆ ಅನೂಪ್ ರುಬೆನ್ ಸಂಗೀತ ನೀಡಿದ್ದಾರೆ. ಚೆನ್ನಾಂಬಿಕೆ ಫಿಲಂಸ್ ಬ್ಯಾನರ್ ಅಡಿ ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಾಣ ಮಾಡಿದ್ದು, ಸ್ವಾಮಿ ಅವರ ಛಾಯಾಗ್ರಹಣವಿದೆ. ಜೊತೆಗೆ ರಘು ನಿಡುವಳ್ಳಿ ಸಂಭಾಷಣೆಯಿದೆ.

ಹಿರಿಯಾ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದು, ಫ್ಯಾಮಿಲಿ ಎಮೋಷನಲ್ ಸಿನಿಮಾವಾಗಿದ್ದರು. ಕಾಮಿಡಿ ಸೀನ್‍ಗಳು ಹೆಚ್ಚಿವೆ ಎನ್ನಲಾಗಿದೆ. ಒಟ್ಟಾರೆ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿರುವವರಿಗೆ ಜನವರಿ 25 ಸಂಭ್ರಮದ ದಿನ.