ಬೆಳ್ಳುಳ್ಳಿಯ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಉಪಯೋಗಕಾರಿ ಅಂಶಗಳಿವೆ, ಉತ್ತಮ ಜೀರ್ಣಕಾರಿ ಅಂಶವಿದ್ದು, ಚೇಳಿನಂತಹ ವಿಷಕಾರಿ ಹುಳು ಕಚ್ಚಿದ್ದಾಗ ಇದರ ರಸವನ್ನು ಹಚ್ಚುವುದರಿಂದ ಗುಣಮುಖವಾಗುತ್ತದೆ. ಬೆಳ್ಳುಳ್ಳಿ ಸುಟ್ಟು ತಿನ್ನುವುದರಿಂದ ಕೆಮ್ಮು ಮಾಯವಾಗುವುದರ ಜೊತೆಗೆ ಹೊಟ್ಟೆ ನೋವಿಗೂ ರಾಮಭಾಣ ಇದ್ದ ಹಾಗೆ. ಕಿವಿ ನೋವಿಗೆ ಬೆಳ್ಳುಳ್ಳಿ ಹಾಗೂ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಕಿವಿನೋವು ಮಾಯವಾಗುತ್ತದೆ.

ಉಬಸ ಇರುವ ರೋಗಿಗಳು ಬೆಳ್ಳುಳ್ಳಿ ಹಾಲಿನಲ್ಲಿ ಬೆರೆಸಿ ತಿನ್ನುವುದರಿಂದ ರೋಗ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಹೃದಯ ಸಂಬಂಧಿ ಕಾಯಿಲೆ, ರಕ್ತದ ಶುದ್ಧೀಕರಣ, ಮೊಡುವೆಯ ಕಲೆಗಳು ಮಾಯವಾಗುವುದರ ಜೊತೆಗೆ ಅನೇಕ ಕಾಯಿಲೆಗೆ ರಾಮಭಾಣ